ಮೈಸೂರು ದಸರಾ ಮಹೋತ್ಸವ: ಸೆ.16 ರಂದು ಅರಮನೆಗೆ ಆಗಮಿಸುವ ಗಜಪಡೆ ಸ್ವಾಗತಕ್ಕೆ ಸಿದ್ಧತೆ.

Promotion

ಮೈಸೂರು,ಸೆಪ್ಟಂಬರ್,14,2021(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು  ಅರಣ್ಯಭವನಕ್ಕೆ ಬಂದು ಬೀಡು ಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಸೆಪ್ಟಂಬರ್ 16 ರಂದು ಅರಮನೆಗೆ ಪ್ರವೇಶಿಸಲಿವೆ.

ಸೆ.16ಕ್ಕೆ ಅರಮನೆಗೆ ಆಗಮಿಸಲಿರುವ ಅಭಿಮನ್ಯು ಅಂಡ್ ಟೀಂನ ಆನೆಗಳ ಸ್ವಾಗತಕ್ಕೆ ಅರಮನೆ ಆವರಣದಲ್ಲಿ ಸಿದ್ದತೆ ನಡೆಯುತ್ತಿದೆ. ಆನೆಗಳ ವಾಸ್ತವ್ಯಕ್ಕೆ ಶೆಡ್ ನಿರ್ಮಾಣ ಕಾರ್ಯ ಸಾಗುತ್ತಿದ್ದು, ಮಾವುತ ಕಾವಾಡಿಗಳಿಗೂ ಪ್ರತ್ಯೇಕ ಶೆಡ್ ನಿರ್ಮಾಣ ಮಾಡಲಾಗುತ್ತಿದೆ.

ಇನ್ನು ಅರಮನೆ ಆವರಣದಲ್ಲಿ ಕ್ಲೀನಿಂಗ್ ಕಾರ್ಯ ಭರದಿಂದ ಸಾಗಿದ್ದು, ಸೆಪ್ಟಂಬರ್ 16ರಂದು ಜಿಲ್ಲಾಡಳಿತ ಗಜಪಡೆಗಳಿಗೆ ಸ್ವಾಗತ ನೀಡಲಿದೆ. ಉಸ್ತುವಾರಿ ಸಚಿವರು ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಿ ಸ್ವಾಗತಿಸಲಿದ್ದಾರೆ. ಕೋವಿಡ್ ಹಿನ್ನೆಲೆ ಈ ಬಾರಿಯೂ ಸರಳ ಸಾಂಪ್ರದಾಯಕ ದಸರಾ ಆಚರಣೆಗೆ ನಿರ್ಧರಿಸಲಾಗಿದ್ದು ಅಭಿಮನ್ಯು ಸೇರಿ 8 ಆನೆಗಳನ್ನ ಮಾತ್ರ ಕರೆಸಿಕೊಳ್ಳಲಾಗಿದೆ.

Key words: Dasara Mahotsav – Mysore-Preparing –Gajapade- arrives