ಇದ್ದಕ್ಕಿದಂತೆ ನಟ ದರ್ಶನ್ ಸಾಲು ಮರದ ತಿಮ್ಮಕ್ಕನ ಮನೆಗೆ ಭೇಟಿ ನೀಡಿದ್ದೇಕೆ?!

Promotion

ಬೆಂಗಳೂರು, ಅಕ್ಟೋಬರ್ 21, 2021 (www.justkannada.in): ನಟ ದರ್ಶನ್ ನೆನ್ನೆ ಪರಿಸರವಾದಿ, ಸಾಲು ಮರದ ತಿಮ್ಮಕ್ಕನ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಶೂಟಿಂಗ್ ನಿಂದ ಬಿಡುವಿನಲ್ಲಿರುವ ದರ್ಶನ್ ಸಾಲು ಮರದ ತಿಮ್ಮಕ್ಕನ ನಿವಾಸಕ್ಕೆ ಆಗಮಿಸಿ ಅವರ ಕುಶಲೋಪರಿ ವಿಚಾರಿಸಿ ಆಶೀರ್ವಾದ ಪಡೆದರು.

ದರ್ಶನ್ ಕೂಡಾ ಪರಿಸರ, ಪ್ರಾಣಿಗಳ ಪ್ರೇಮಿ. ಹೀಗಾಗಿ ಹಿರಿಯ ಜೀವವನ್ನು ಭೇಟಿ ಮಾಡಿ ಆಶೀರ್ವಾದ ಪಡೆದು, ತಿಮ್ಮಕ್ಕ ಅವರ ಆರೋಗ್ಯ ವಿಚಾರಿಸಿದರು.

ಇದೇ ವೇಳೆ ತಿಮ್ಮಕ್ಕ ಅವರನ್ನು ಸನ್ಮಾನಿಸಿದರು. ಮೊನ್ನೆಯಷ್ಟೇ ದರ್ಶನ್ ಹಿರಿಯ ನಟಿ ಸರೋಜಾದೇವಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.