‘ಕುರುಕ್ಷೇತ್ರ’ಕ್ಕೆ 50ನೇ ದಿನದ ಸಂಭ್ರಮ!

ಬೆಂಗಳೂರು, ಸೆಪ್ಟೆಂಬರ್ 20, 2019 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಸದ್ಯದಲ್ಲೇ 50 ದಿನ ಪೂರೈಸಲಿದೆ.

ಈ ಸಂಭ್ರಮಕ್ಕೆ ಡಿ ಬಾಸ್ ಭಕ್ತರು ಸಜ್ಜಾಗುತ್ತಿದ್ದಾರೆ. ಜತೆಗೆ ಕುರುಕ್ಷೇತ್ರ ತಂಡವೂ ಸರ್ಪ್ರೈಸ್ ನೀಡಿದೆ. ಚಿತ್ರದ ಶೀರ್ಷಿಕೆ ಗೀತೆ ‘ಸಾಹೋರೆ ಸಾಹೋ….’ ವಿಡಿಯೋ ವರ್ಷನ್ ಬಿಡುಗಡೆಯಾಗುತ್ತಿದೆ.

ಇಂದು ಸಂಜೆ 5 ಗಂಟೆಗೆ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ರಿಲೀಸ್ ಆಗಲಿದೆ. ವಿ.ನಾಗೇಂದ್ರ ಪ್ರಸಾದ್ ಈ ಗೀತೆಗೆ ಸಾಹಿತ್ಯ ಬರೆದಿದ್ದು, ವಿಜಯ ಪ್ರಕಾಶ್ ಹಾಡಿದ್ದಾರೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ.