ಅಡೆತಡೆ ದಾಟಿದ ‘ರಾಬರ್ಟ್’! ಫೆ.3ಕ್ಕೆ ತೆಲುಗು ಫಸ್ಟ್ ಲುಕ್ ಟೀಸರ್ ರಿಲೀಸ್

ಬೆಂಗಳೂರು, ಫೆಬ್ರವರಿ 01, 2020 (www.justkannada.in): ರಾಬರ್ಟ್ ಚಿತ್ರದ ತೆಲುಗಿನ ಫಸ್ಟ್ ಲುಕ್ ಟೀಸರ್ ಫೆ.ರಂದು ಸಂಜೆ 4.05ಕ್ಕೆ ಬಿಡುಗಡೆ ಮಾಡಲಾಗುತ್ತಿದೆ.

ಈ ವಿಷಯವನ್ನು ನಿರ್ದೇಶಕ ತರುಣ್ ಸುಧೀರ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ.

ಅಂದಹಾಗೆ ‘ರಾಬರ್ಟ್’ ಚಿತ್ರವನ್ನು ಮಾರ್ಚ್ 11ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ, ಈ ನಡುವೆ ಉದ್ಭವಿಸಿದ್ದ ಚಿತ್ರಮಂದಿರಗಳ ಸಮಸ್ಯೆಯೂ ಪರಿಹಾರವಾಗಿದೆ.

ಉಮಾಪತಿ ಶ್ರೀನಿವಾಸ್ ಗೌಡ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಆಶಾ ಭಟ್ ನಾಯಕಿಯಾಗಿ ನಟಿಸಿದ್ದಾರೆ.