ರೌಡಿ ಶೀಟರ್’ನಿಂದ ಪೊಲೀಸರಿಗೆ ಧಮಕಿ: ದೂರು ದಾಖಲು

ಹಾಸನ, ಏಪ್ರಿಲ್ 17, 2020 (www.justkannada.in): ರೌಡಿ ಶೀಟರ್ ಒಬ್ಬ, ಇಬ್ಬರು ಪೊಲೀಸರಿಗೆ ಧಮಕಿ ಹಾಕಿದ ಘಟನೆ ನಡೆದಿದೆ.

ಈ ರೌಡಿ ಶೀಟರ್, ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ನಿಮ್ಮನ್ನು ಈಗಲೇ ವರ್ಗಾವಣೆ ಮಾಡಿಸುತ್ತೇನೆ. ಈಗಾಗಲೇ ನಿಮ್ಮ ಪಿ.ಎಸ್.ಐ ನ್ನು ಟ್ರಾನ್ಸ್ಫರ್ ಮಾಡಿಸಿಲ್ಲವೇ
ಎಂದು ಕರ್ತವ್ಯ ನಿರತ ಪೊಲೀಸರಿಗೆ ಧಮಕಿ ಹಾಕಿರುವುದು.
ಈ ಘಟನೆ ಬೇಲೂರು ತಾಲೂಕಿನ ಅರೆಹಳ್ಳಿಯಲ್ಲಿ ನಡೆದಿದೆ.

ಈ ಸಂಬಂಧ ಪೊಲೀಸರು ರೌಡಿ ಶೀಟರ್ ವಿರುದ್ದ ದೂರು ದಾಖಲಿಸಿಕೊಂಡಿದ್ದಾರೆ.

ಘಟನೆ ಹಿನ್ನೆಲೆ :
ಕಳೆದ ವಾರ ಇದೇ ಊರಲ್ಲಿ ಒಬ್ಬ ಕೋಮು ಸಾಮರಸ್ಯ ಹಾಳು ಮಾಡುವಂತಹ ಪೋಸ್ಟ್ ಗಳನ್ನು ಹಾಕುತ್ತಾನೆಂದು ಬಂಧಿಸಿ, ಬಿಡುಗಡೆ ಮಾಡಲಾಗಿತ್ತು.
ಕನ್ನಡ ಮತ್ತು ‌ಸಂಸ್ಕೃತಿ ಸಚಿವರು ಆ ಬಂಧಿತನ ಪರ ವಹಿಸಿ ಟ್ವೀಟ್ ಮಾಡಿದರು. ಅರೆಸ್ಟ್ ಮಾಡಿದ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಆಗಬೇಕೆಂದು ಗೃಹ ಮಂತ್ರಿಗೆ ಮನವಿ ಮಾಡಿದರು. ಅದಾದ ಕೆಲವೇ ಗಂಟೆಗಳಲ್ಲಿ ಇಬ್ಬರು ಅಧಿಕಾರಿಗಳ ಮೇಲೆ ತನಿಖೆಗೆ ಆದೇಶವಾಯ್ತು. ಪಿ.ಎಸ್.ಐ ಅವರನ್ನು ಮೊದಲು ರಜೆ ಮೇಲೆ ಕಳುಹಿಸಲಾಯ್ತು. ನಂತರ ಎಸ್.ಪಿ ಕಚೇರಿಗೆ ಬೇರೆ ಜವಾಬ್ದಾರಿ ಕೊಟ್ಟು ಕರೆಸಿಕೊಂಡರು.

ಈ ಘಟನೆ ನಂತರ ಇದೀಗ ರೌಡಿಶೀಟರ್ ಗಳು ಮತ್ತೆ ಪೊಲೀಸರಿಗೆ ಧಮಕಿ ಹಾಕಿರುವ ಪ್ರಕರಣ ನಡೆದಿದೆ.