ದಲಿತ ಜನಾಂಗದ ಗೋವಿಂದ ಕಾರಜೋಳ, ರಮೇಶ್ ಜಗಜಿಣಗಿ ಸಿಎಂ ಆಗಲಿ: ದಲಿತ ಮುಖಂಡರ ಒತ್ತಾಯ

kannada t-shirts

ಬೆಂಗಳೂರು, ಜುಲೈ 24, 2021 (www.justkannada.in): ಮುಖ್ಯಮಂತ್ರಿ ಯಡಿಯೂರಪ್ಪ ಬೇರುಮಟ್ಟದಿಂದ ರೈತ ಪರ , ಜನಪರ ಹೋರಾಟಗಳನ್ನು ಮಾಡಿ , ಪಕ್ಷವನ್ನು ಕಟ್ಟಿ ಬೆಳೆಸಿ ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಭಾರಿಗೆ ಸರ್ಕಾರ ರಚಿಸುವಲ್ಲಿ ತಮ್ಮನ್ನೇ ಸಮರ್ಪಿಸಿಕೊಂಡ ಇವರನ್ನು ಅವಧಿ ಮುಗಿಯುವವರೆಗೂ ಬದಲಾವಣೆ ಮಾಡಬಾರದೆಂದು ಕೇಂದ್ರ ವರಿಷ್ಟರಿಗೆ ಒತ್ತಾಯಿಸುತ್ತೇವೆ ಎಂದು ದಲಿತ ಮುಖಂಡರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಮಾತನಾಡಿ, ಯಡಿಯೂರಪ್ಪ ನವರನ್ನು ಬದಲಾವಣೆ ಮಾಡಿದ ಪಕ್ಷದಲ್ಲಿ ಅಸ್ಪೃಷ್ಯ ಸಮಾಜದ ಹಿರಿಯರಾದ  ಗೋವಿಂದ ಕಾರಜೋಳ ಅಥವಾ  ರಮೇಶ್ ಜಿಗಜಿಣಗಿ ಇವರನ್ನು ಮುಖ್ಯ ಮಂತ್ರಿಗಳನ್ನಾಗಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಸ್ವತಂತ್ರ ಬಂದು 74 ವರ್ಷಗಳಲ್ಲಿ ಲಿಂಗಾಯಿತರು 28 ವರ್ಷ ಹಾಗೂ ಒಕ್ಕಲಿಗರು 18 ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿದ್ದಾರೆ . ಇದರ ನಡುವೆ ಕೆಲ ಹಿಂದುಳಿದ ಜಾತಿಗಳು ಕೂಡ ಕೆಲವೇ ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿದ್ದು , ಈ ಸಮುದಾಯಗಳು ಕೂಡ ಅಧಿಕಾರದಿಂದ ವಂಚಿತರಾಗಿದ್ದಾರೆ . ಈ ಹಿನ್ನೆಲೆಯಲ್ಲಿ 224 ಕ್ಷೇತ್ರಗಳ ಪೈಕಿ ಮಾದಿಗರು 194 ಕ್ಷೇತ್ರಗಳಲ್ಲಿ ಮತದಾರರಿದ್ದು 50 ಕ್ಷೇತ್ರಗಳಲ್ಲಿ ತಮ್ಮ ಪ್ರಾಬಲ್ಯವನ್ನು ಹೊಂದಿದ್ದಾರೆ , ಛಲವಾದಿಗಳು 186 ಕ್ಷೇತ್ರಗಳಲ್ಲಿ ಮತದಾರರಿದ್ದು 45 ಕ್ಷೇತ್ರಗಳಲ್ಲಿ ಪ್ರಾಬಲ್ಯ ಹೊಂದಿದ್ದಾರೆ , ವಾಲ್ಮೀಕಿ 40 ಕ್ಷೇತ್ರಗಳಲ್ಲಿ ಮತದಾರರಿದ್ದು 20 ಕ್ಷೇತ್ರಗಳಲ್ಲಿ ಪ್ರಾಬಲ್ಯ ಹೊಂದಿದ್ದಾರೆ ಹಾಗೂ ಹಿಂದುಳಿದ ಜಾತಿಗಳಲ್ಲಿ ಬಹುಸಂಖ್ಯಾತರಾದ ಕುರುಬರುno 190 ಕ್ಷೇತ್ರಗಳಲ್ಲಿ  ಪ್ರಾಬಲ್ಯ ಹೊಂದಿದ್ದಾರೆ ಇಂತಹ ಬಹು ಸಂಖ್ಯಾತ ಮುಖಂಡರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪಂಚಮ ಅಸ್ಪೃಶ್ಯ ಜಾತಿಗಳ ಹೋರಾಟ ಸಮಿತಿ ರಾಜ್ಯಾಧ್ಯಕ್ಷ  ಮರಿಯಪ್ಪ ಶಿವಪ್ಪ ನಾಗಣ್ಣವರ,  ಮಹಾನಾಯಕ ರಕ್ಷಣಾ ವೇದಿಕೆ ಉಪಾಧ್ಯಕ್ಷ ಬಿ.ಪ್ರಸನ್ನ ಕುಮಾರ್,  ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ರಾಜಶೇಖರ್ ದೊಡ್ಡನೆಕ್ಕುಂದಿ,  ಬೋವಿ ಜನಾಂಗ ಒಕ್ಕೂಟ ಅಧ್ಯಕ್ಷ ರಮೇಶ್ ಬೋವಿ ಸೇರಿದಂತೆ ಹಾಜರಿದ್ದರು.

website developers in mysore