“ಸಿಲಿಂಡರ್‍ ಅನ್ನು ಕತ್ತೆಯ ಮೇಲಿಟ್ಟು” ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ

kannada t-shirts

ಬೆಂಗಳೂರು,ಫೆಬ್ರವರಿ,11,2021(www.justkannada.in) : ಸಿಲಿಂಡರ್‍ ಅನ್ನು ಕತ್ತೆಯ ಮೇಲಿಟ್ಟು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ದಿನಸಿ ಪದಾರ್ಥಗಳ ಬೆಲೆ ಏರಿಕೆ ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಿನೂತನವಾಗಿ ಪ್ರತಿಭಟನೆ ನಡೆಸಿದರು.jkಮೈಸೂರು ಬ್ಯಾಂಕ್ ವೃತ್ತದಲ್ಲಿ ಸಿಲಿಂಡರ್‍ ಅನ್ನು ಕತ್ತೆಯ ಮೇಲಿಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಕಿಡಿಕಾರಿದರು.

ನಿರಂತರವಾಗಿ ಸಿಲಿಂಡರ್, ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಿರುವುದರಿಂದ ಜನಸಾಮಾನ್ಯರ ಬದುಕು ಬರ್ಬಾದ್ ಆಗಿದೆ. ದಿನಸಿ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಆಳುವ ಸರ್ಕಾರಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

“ಪ್ರಧಾನಿ ಅವರು ಅನಗತ್ಯ ವಿಷಯಗಳಿಗೆ ಕಣ್ಣೀರು ಸುರಿಸುತ್ತಾರೆ”

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ಬರಬೇಕಾಗಿದ್ದ ಸರ್ಕಾರ ಬೆಲೆ ಏರಿಕೆಯ ಬರೆ ಎಳೆಯುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಲೀಟರ್‍ಗೆ ಸುಮಾರು 100 ರೂ. ತಲುಪಿದೆ. ಕೇಂದ್ರ ಸರ್ಕಾರ ಬೆಲೆ ಇಳಿಸುವ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಪ್ರಧಾನಿ ಅವರು ಈ ಬಗ್ಗೆ ಮಾತನಾಡುತ್ತಿಲ್ಲ. ಅನಗತ್ಯ ವಿಷಯಗಳಿಗೆ ಕಣ್ಣೀರು ಸುರಿಸುತ್ತಾರೆ ಎಂದು ಟೀಕಿಸಿದರು.

ಸರ್ಕಾರ ರಸ್ತೆಗೆ ಮೊಳೆಯೊಡೆಯುವ ಮೂಲಕ ರೈತರ ಹಕ್ಕನ್ನು ಕಸಿಯುವ ಯತ್ನ

Cylinder,Use,Donkey's,Put up,Petrol,Diesel,Cooking,Gas,Management Price,rise,Condemnation,Vatal Nagaraj,Protest

ಸಂಸದರು ಯಾರು ಬೆಲೆ ಏರಿಕೆಯ ಪ್ರಸ್ತಾಪವನ್ನೇ ಮಾಡುತ್ತಿಲ್ಲ. ಅಕ್ಕಿ, ಬೇಳೆ, ಎಣ್ಣೆ ಕಾಳುಗಳ ಬೆಲೆ ಪ್ರತಿದಿನ ಏರಿಕೆಯಾಗುತ್ತಿದ್ದರೂ, ಯಾರೂ ಕೊಳ್ಳುವವರೇ ಇಲ್ಲದಂತಾಗಿದೆ. ಎರಡು ತಿಂಗಳಿನಿಂದ ರೈತರು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಅದನ್ನು ಹತ್ತಿಕ್ಕಲು ಸರ್ಕಾರ ರಸ್ತೆಗೆ ಮೊಳೆಯೊಡೆಯುವ ಮೂಲಕ ಅವರ ಹಕ್ಕನ್ನು ಕಸಿಯುತ್ತಿದೆ ಎಂದು ಕಿಡಿಕಾರಿದರು.

key words : Cylinder-Use-Donkey’s-Put up-Petrol-Diesel-Cooking-Gas-Management Price-rise-Condemnation-Vatal Nagaraj-Protest

website developers in mysore