ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಿಂದ ಸೈಕಲ್ ಜಾಥಾ: ಸರ್ಕಾರ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ಗುಡುಗು.

kannada t-shirts

ಬೆಂಗಳೂರು,ಸೆಪ್ಟಂಬರ್,20,2021(www.justkannada.in):  ಪೆಟ್ರೋಲ್,ಡೀಸೆಲ್  ದಿನನಿತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಇತ್ತೀಚೆಗೆ ಎತ್ತಿನಗಾಡಿ ಚಲೋ ನಡೆಸಿದ್ದ ರಾಜ್ಯ ಕಾಂಗ್ರೆಸ್ ಇದೀಗ ಇಂದು ಸೈಕಲ್ ಜಾಥಾ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಕಾಂಗ್ರೆಸ್ ಸೈಕಲ್ ಜಾಥಾ ನಡೆಸುತ್ತಿದ್ದು ಬಿಜೆಪಿ ಬೆಲೆ ಜಾಸ್ತಿ ಮಾಡುವ ಪಾರ್ಟಿ ಎಂದು ಭಿತ್ತಿಪತ್ರ ಹಿಡಿದು ಕೈ ಕಾರ್ಯಕರ್ತರು ಹರಿಹಾಯ್ದಿದ್ದಾರೆ.

ಬೆಲೆ ಏರಿಕೆ ವಿರೋಧಿಸಿ ಸರ್ಕಾರದ ವಿರುದ್ಧ ಗುಡುಗಿರುವ  ಮಾಜಿ ಸಿಎಂ ಸಿದ್ಧರಾಮಯ್ಯ,  ಬೆಲೆ ಏರಿಕೆ ಖಂಡಿಸಿ ಎತ್ತಿನಗಾಡಿ ಚಲೋ ನಡೆಸಿದ್ದವು.  ಆದರೆ ಸರ್ಕಾರ ಬೆಲೆ ಏರಿಕೆ ನಿಯಂತ್ರಣ ಮಾಡಲೇ ಇಲ್ಲ.  ಹೀಗಾಗಿ ಮತ್ತೆ ಸೈಕಲ್ ಜಾಥಾ ಮಾಡುತ್ತಿದ್ದೇವೆ.  ಬೆಲೆ ಏರಿಕೆ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ್ದವು. ಆದರೆ ಬೆಲೆ ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ  ಸಿಲೆಂಡರ್ ಬೆಲೆಯನ್ನೂ ಇಳಿಸಿಲ್ಲ. ಇಳಿಸಿಲ್ಲ ಸದನ ಮುಗಿದ ಬಳಿಕವೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹರಿಹಾಯ್ದರು.

Key words: Cycle Jatha – Congress –condemning- price -hike

ENGLISH SUMMARY…

Cong. takes out ‘bicycle jatha’ opposing price hike: Former CM Siddaramaiah lambasts Government
Bengaluru, September 20, 2021 (www.justkannada.in): The Karnataka Pradesh Congress Committee took out a bicycle jatha in Bengaluru opposing the increase in prices of essential commodities, including petrol, diesel, etc.
The bicycle jatha was held under the leadership of KPCC President D.K. Shivakumar, Leader of the opposition in the assembly Siddaramaiah, from the KPCC office to Vidhana Soudha. The protestors displayed slogans stating “BJP Bele Jaasti Maaduv Party,’ (BJP means price hike party). Meanwhile, the police stopped the bicycle jatha near Queen’s road.
Speaking on the occasion the Congress leaders said that they had taken out a bullock cart jatha recently opposing the price hike, but the government didn’t take any measures to control it, “So we have organized a bicycle jatha this time. We also raised our voice in the assembly against the price hike, but the Union Government has completely failed in controlling it, they have not even reduced the price of LPG cylinders. We will continue our fight,” they said.
Keywords: KPCC/ Bicycle Jatha/ oppose/ price hike

website developers in mysore