ರಾಜ್ಯದ ಜನತೆಗೆ  ಕರೆಂಟ್ ಶಾಕ್ : ವಿದ್ಯುತ್ ದರ ಹೆಚ್ಚಳ…

ಬೆಂಗಳೂರು,ಮೇ,30,2019(www.justkannada.in):  ರಾಜ್ಯದ ಜನತೆಗೆ ಸರ್ಕಾರ ವಿದ್ಯುತ್ ಶಾಕ್ ನೀಡಿದ್ದು ಪ್ರತಿ ಯುನಿಟ್ ಗೆ  33 ಪೈಸೆ ವಿದ್ಯುತ್ ದರ ಏರಿಕೆ ಮಾಡಲಾಗಿದೆ.

ಈ ಬಗ್ಗೆ  ಮಾತನಾಡಿ ಮಾಹಿತಿ ನೀಡಿದ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭುದಯಾಳ್ ಮೀನಾ, .2019-20 ನೇ ಸಾಲಿಗೆ ಕುರಿತಂತೆ ವಿದ್ಯುತ್ ದರ ಪರಿಷ್ಕರಣೆ ಪ್ರಕಟ ಮಾಡಲಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರ 33 ಪೈಸೆ ಏರಿಕೆ ಮಾಡಲಾಗಿದೆ. ಬೆಸ್ಕಾಂ ಪ್ರತಿ ಯೂನಿಟ್ ಗೆ 1.01 ರೂ. ಏರಿಕೆಗೆ ಕೆಇಆರ್ ಸಿ ಗೆ ಪ್ರಸ್ತಾವನೆ ಸಲ್ಲಿಸಿತ್ತು‌. ಆದರೆ ಕೆಇಆರ್ ಸಿ ಯೂನಿಟ್ ಗೆ 33 ಪೈಸೆ ಏರಿಕೆಗೆ ಒಪ್ಪಿಗೆ ನೀಡಿದೆ ಎಂದು ಹೇಳಿದರು.

ಮೆಸ್ಕಾಂ ಒಂದು ಯೂನಿಟ್ ವಿದ್ಯುತ್ ಗೆ 1.38 ಪೈಸೆ ಏರಿಕೆ ಕೋರಿತ್ತು. ಚೆಸ್ಕಾಂ ಯೂನಿಟ್ ಗೆ ಸರಾಸರಿ 1 ರೂ. ಏರಿಕೆ ಕೋರಿತ್ತು. ಹೆಸ್ಕಾಂ 1.63 ರೂ ಏರಿಕೆ ಮಾಡುವಂತೆ ಕೋರಿತ್ತು. ಜೆಸ್ಕಾಂ 1.27 ಪೈಸೆ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಒಟ್ಟಾರೆ 5 ವಿದ್ಯುತ್ ಸರಬರಾಜು ಕಂಪನಿಯಲ್ಲಿ ಸರಾಸರಿ ಯೂನಿಟ್ ವಿದ್ಯುತ್ ದರ 33 ಪೈಸೆ ಏರಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಎಸ್ಕಾಂಗಳು ಶೇ. 17 ರಷ್ಟು ಏರಿಕೆಗೆ ಬೇಡಿಕೆ ಸಲ್ಲಿಸಿದ್ದವು.. ಕಳೆದ ವರ್ಷ ಶೇ.5ರಷ್ಟು ದರ ಏರಿಕೆ ಆಗಿತ್ತು. ಈಗ ಶೇ.4.88 ರಷ್ಟು  ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ ಎಂದು ಕೆಇಆರ್ ಸಿ ಅಧ್ಯಕ್ಷ ಶಂಭು ದಯಾಳ್ ಮೀನಾ ಪ್ರಕಟಿಸಿದ್ದಾರೆ.

Key words: Current shock for the people. Power Rate Increase…

#PowerRate #Increase BESCOM #KarnatakaElectricityRegulatoryCommission