ವಿದೇಶಿ ನೆಲದಲ್ಲಿ ‘ ಕನ್ನಡ ಕಲಿ ‘ ಕೆ ಗೆ ಗ್ರೀನ್ ಸಿಗ್ನಲ್..

ಮೈಸೂರು, ಫೆ.26, 2021 : (www.justkannada.in news) ಅಮೇರಿಕಾದ ಫ್ರೆಮೊಂಟ್ ಯೂನಿಯನ್ ಹೈಸ್ಕೂಲ್ ಡಿಸ್ಟಿಂಕ್ಟ್, ಮಿಲ್ಪಿಟಸ್ ಹಾಗೂ ಕ್ಯುಪರ್‌ಟಿನೊ ಕೇಂದ್ರದ ‘ಕನ್ನಡ ಕಲಿ ಹೆಚ್‌ಎಸ್‌ಸಿಪಿ (ಹೈಸ್ಕೂಲ್ ಕ್ರೆಡಿಟ್ ಪ್ರೋಗ್ರಾಂ)’ ವೇದಿಕೆಯು, ೨೦೨೦ರ ಮಾರ್ಚ್ನಲ್ಲಿ ಕನ್ನಡವನ್ನು ವಿದೇಶಿ ಭಾಷೆಯನ್ನಾಗಿ ಕಲಿಸಲು ಸಲ್ಲಿಸಿದ್ದ ಅರ್ಜಿಯನ್ನು ಜೂನ್ ೨೦೨೦ರಲ್ಲಿ ಅನುಮೋದಿಸಲಾಗಿದೆ.jk
ಈ ಪ್ರಕಾರವಾಗಿ ಅಮೇರಿಕಾದ ಆ ಪ್ರಾಂತ್ಯದಲ್ಲಿ ಕನ್ನಡವನ್ನು ವಿದೇಶಿ ಭಾಷೆಯನ್ನಾಗಿ ಕಲಿಸಲು ಅಲ್ಲಿನ ಪ್ರಾಧಿಕಾರ ಅನುಮೋದಿಸಿದ್ದು, ಕನ್ನಡ ವಿದೇಶದಲ್ಲಿ ಡಿಂಡಿಮ ಭಾರಿಸಿದೆ.
ಈ ಪ್ರಸ್ತಾವನೆಯನ್ನು ಸಲ್ಲಿಸಿದ್ದ ಹೈಸ್ಕೂಲ್ ಸಮಿತಿ ಒಳಗೊಂಡಿದ್ದ ಸದಸ್ಯರಲ್ಲಿ ಜ್ಯೋತಿ ಸರಗೂರು, ಸಂಧ್ಯಾ ಗಾಯಿತ್ರಿ, ನಿರುಪಮಾ ಬಾಯರ್, ವಸುಧಾ ಹೆಗ್ಡೆ, ಜ್ಯೋತಿ ಶೇಖರ್ ಹಾಗೂ ಮಹಾಂತೇಶ್ ಎಂ.ಸಿ. ಅವರು ಇದ್ದಾರೆ.
ಅಮೇರಿಕಾದ ಯಾವುದಾದರೂ ಎಫ್‌ಯುಹೆಚ್‌ಎಸ್‌ಡಿ ಹೈಸ್ಕೂಲುಗಳಲ್ಲಿ ನಿಮ್ಮ ಮಕ್ಕಳು ಓದುತ್ತಿದ್ದರೆ ಅವರಿಗೆ ಕನ್ನಡವನ್ನು ವಿದೇಶಿ ಭಾಷೆಯನ್ನಾಗಿ ಓದುವ ಅವಕಾಶ ದೊರೆಯುತ್ತದೆ. ಇಂತಹವರು ಹೋಮಸ್ಟೀಡ್, ಫ್ರೆಮೊಂಟ್, ಮಾಟಾ ವಿಸ್ಟಾ, ಕ್ಯುಪರ್‌ಟಿನೊ, ಲಿನ್‌ಬ್ರೂಕ್ ಹೈಸ್ಕೂಲ್ಸ್ನಲ್ಲಿ ತಮ್ಮ ಶಾಲೆಗಳ ಸಂಬಂಧಪಟ್ಟ ಆಪ್ತಸಮಾಲೋಚಕರಿಂದ ಮುಂಚಿತ ಅನುಮೋದನೆ ಪಡೆದು ‘ಕನ್ನಡ ಕಲಿ’ ಹೆಚ್‌ಎಸ್‌ಸಿಪಿ (ಹೈಸ್ಕೂಲ್ ಕ್ರೆಡಿಟ್ ಪ್ರೋಗ್ರಾಂ)ಗೆ ನೋಂದಾಯಿಸಿಕೊಳ್ಳಬಹುದು.

ಕೃಪೆ-internet

ನೋಂದಣಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: https://bakannadakali.org/hscp_registration.html

ENGLISH SUMMARY….

Kannada gains supremacy in foreign land
Mysuru, Feb. 26, 2021 (www.justkannada.in): An appeal made by ‘Kannada Kali’ (High School Credit Program), Main Center in Milipitas, and Cupertino Centre, to the Fremont Union High School District seeking approval to teach Kannada as a foreign language elective in March 2020 has been approved in June 2020. Thus Kannada has gained supremacy in a foreign land.

cupertino-offering-kannada-high-school-kannada-kali
ಕೃಪೆ-internet

The High School Committee consists of Jyothi Sargur, Sandhya Gayathri, Nirupama Bayar, Vasudha Hegde, Jyothi Shekar, and Mahanesh MC.
In case if any of your children are studying in any of the FUHSD high schools, they can get the advantage of learning Kannada as a foreign language now in their school by seeking pre-approval from their respective school’s Counsellors at Homestead, Fremont, Monta Vista, Cupertino, Lynbrook High Schools, and enroll themselves for Kannada Kali’s HSCP program. You can register through this link https://bakannadakali.org/hscp_registration.html
Keywords: Kannada Kali/ supremacy/ foreign land/ Fremont Union High school District

key words : cupertino-offering-kannada-high-school-kannada-kali