ಇಂದಿನಿಂದ ಮೈಸೂರು ವೈದ್ಯಕೀಯ ಕಾಲೇಜು-ಸಂಶೋಧನಾ ಸಂಸ್ಥೆಯಿಂದ ‘ಸಂಸ್ಕೃತಿ-22’ ಕಾರ್ಯಕ್ರಮ

Promotion

ಮೈಸೂರು, ನವೆಂಬರ್ 04, 2022 (www.justkannada.in): ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯಿಂದ ನ.4ರಿಂದ 6ರವರೆಗೆ ‘ಸಂಸ್ಕೃತಿ-22’ ಕಾರ್ಯಕ್ರಮ ಆಯೋಜಿಸಲಾಗಿದೆ.

ನಗರದ ಜೆಕೆ ಗ್ರೌಂಡ್ಸ್ ನಲ್ಲಿರುವ ವಜ್ರ ಮಹೋತ್ಸವ ಸಭಾಂಗಣದಲ್ಲಿ ಸಂಜೆ 5ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಪಾಲ್ಗೊಳ್ಳಲಿದ್ದಾರೆ. ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ ಡೀನ್ ಹಾಗೂ ನಿರ್ದೇಶಕಿ ಡಾ.ಕೆ.ಆರ್.ದ್ರಾಕ್ಷಾಯಿಣಿ ಅಧ್ಯಕ್ಷತೆ ವಹಿಸಲಿದ್ದಾರೆ.

ಇದರೊಂದಿಗೆ ಮೂರುದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇಂದು ನಟ ವಾಸುಕಿ ವೈಭವ್ ತಂಡದಿಂದ ಗಾಯನ ಹಾಗೂ ನೃತ್ಯ ಕಾರ್ಯಕ್ರಮ ನಡೆಲಿದೆ.

ನವೆಂಬರ್ 5ರಂದು ನಟ ಡಾಲಿ ಧನಂಜಯ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ಪೈನಾಪಲ್ ಎಕ್ಸ್ಪ್ರೆಸ್ ತಂಡದಿಂದ ಫ್ಯಾಷನ್ ಶೋ ನಡೆಯಲಿದೆ.

ನವೆಂಬರ್ 6ರಂದು ಡಿಜೆ ಶಾನ್ ತಂಡದಿಂದ ಕಾರ್ಯಕ್ರಮ ನಡೆಯಲಿದೆ. ಅಂದೇ ಸಮಾರೋಪ ಸಮಾರಂಭವೂ ನಡೆಯಲಿದೆ.