ಸ್ವಚ್ಚ ಸರ್ವೆಕ್ಷಣ್ 2021 ಪ್ರಶಸ್ತಿ: ಸಾಂಸ್ಕೃತಿಕ ನಗರಿ ಮೈಸೂರಿಗೆ ಮತ್ತೆ 5 ಸ್ಟಾರ್ ರ್ಯಾಂಕಿಂಗ್ ಗರಿ

kannada t-shirts

ಮೈಸೂರು,ನವೆಂಬರ್,20,2021(www.justkannada.in): ಸ್ವಚ್ಚನಗರಗಳ ಪಟ್ಟಿಯಲ್ಲಿ ಮಲ್ಲಿಗೆ ನಗರಿ ಮೈಸೂರು ಸ್ಥಾನ ಉಳಿಸಿಕೊಂಡಿದ್ದು ಮತ್ತೆ 5 ಸ್ಟಾರ್ ರ್ಯಾಂಕಿಂಗ್ ಗರಿಯನ್ನ ಮುಡಿಗೇರಿಸಿಕೊಂಡಿದೆ.

ರಾಷ್ಟ್ರಪತಿ ರಾಮನಾಥ್​​ ಕೋವಿಂದ್ ಸ್ವಚ್ಚ ಸರ್ವೆಕ್ಷಣ್ 2021 ಪ್ರಶಸ್ತಿ  ವಿಜೇತ ನಗರಗಳ ಹೆಸರನ್ನು ಘೋಷಿಸಿದ್ದಾರೆ. ಸತತ 5ನೇ ಬಾರಿಗೆ ಇಂದೋರ್ ಸ್ವಚ್ಛ ನಗರಿ ಪಟ್ಟವನ್ನು ಅಲಂಕರಿಸಿದೆ. ಸೂರತ್ ಮತ್ತು ವಿಜಯವಾಡ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಅಲಂಕರಿಸಿದೆ. ಈ ನಡುವೆ ಸಾಂಸ್ಕೃತಿಕ ನಗರಿ ಮೈಸೂರು 5 ಸ್ಟಾರ್ ರ್ಯಾಂಕಿಂಗ್ ಪಡೆದಿದೆ.

ದೆಹಲಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪ್ರತಿ ರಮನಾಥ್ ಕೋವಿಂದ್ ಅವರು  ಪ್ರಶಸ್ತಿ ಪ್ರದಾನ ಮಾಡಿದ್ದು, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಮೇಯರ್ ಸುನಂದ ಪಾಲನೇತ್ರ ಪಾಲಿಕೆ ಆರೋಗ್ಯ ಅಧಿಕಾರಿ ಡಾ ನಾಗರಾಜ್ ಪ್ರಶಸ್ತಿ ಸ್ವೀಕರಿಸಿದರು. 10 ಲಕ್ಷ ಜನಸಂಖ್ಯೆ ಒಳಗಿನ ದೇಶದ 4000 ಮಹಾನಗರಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು.

Key words: Cultural city- Mysore -again – 5 star- ranking- Swacha Survekshan 2021- Award

ENGLISH SUMMARY…

Cultural capital of Karnataka ‘Mysuru’ earns 5 star ranking again in Swachch Sarvekshan 2021
Mysuru, November 20, 2021 (www.justkannada.in): The cultural capital of Karnataka, Mysuru, has yet again earned a 5-star rating in the list of cleanest cities in the country.
Hon’ble President of India Ram Nath Kovind has announced the list of the award-winning cities of the Swachch Sarvekshan 2021. Indore has earned the ‘Cleanest City’ award for the 5th time consecutively. Surat and Vijayawada have secured second and third places respectively. Mysuru has secured a 5-star ranking.
The President of India, Ram Nath Kovind, today accorded the awards at a program held in New Delhi. Mysore City Corporation Commissioner Lakshmikanth Reddy, Commissioner, Mayor Sunanda Phalanetra, and Health Officer Dr. Nagaraj represented Mysuru and also received the award. A total number of 4,000 cities with 10 lakh population had taken part in this competition.
Keywords: Cultural Capital of Karnataka/ Mysuru/ Swachch Sarvekshan/ 5 Star rating

website developers in mysore