ಬೆಳೆ ಸಮೀಕ್ಷೆ ಆಪ್ ಅಪ್ಲೋಡ್  ದಿನಾಂಕ ವಿಸ್ತರಣೆಗೆ ಚಿಂತನೆ…

kannada t-shirts

ಬೆಂಗಳೂರು,ಆ.20,2020(www.justkannada.in):  “ನನ್ನ ಬೆಳೆ ನನ್ನ ಹಕ್ಕು, ನನ್ನ ಬೆಳೆ ಸಮೀಕ್ಷೆ, ನನ್ನ ಪ್ರಮಾಣ ಪತ್ರ” ಎಂದು ರೈತಾಪಿ ವರ್ಗ ಎದೆಯುಬ್ಬಿಸಿ ಹೇಳುವಂತಹ ಹೇಳುವಂಹ ಸ್ವಾಭಿಮಾನಿ ಅನ್ನದಾತ ತನ್ನ ಬೆಳೆಗೆ ತಾನೇ ಪ್ರಮಾಣ ಪತ್ರ ನೀಡುವ ರೈತ ಬೆಳೆ ಸಮೀಕ್ಷೆ ಆಪ್ ಗೆ ನಿಗದಿಪಡಿಸಿದ ಅಂತಿಮ ದಿನವನ್ನು ಇನ್ನೂ ವಿಸ್ತರಿಸುವ ಬಗ್ಗೆ ಕೃಷಿ ಇಲಾಖೆ ಚಿಂತನೆ ನಡೆಸಿದೆ.jk-logo-justkannada-logo

ರೈತ ಬೆಳೆ ಸಮೀಕ್ಷೆ ಆಪ್ಗೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ ಹಾಗೂ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕೃಷಿಕರ ಮೊಗದಲ್ಲಿ ಈ ಬೆಳೆ ಸಮೀಕ್ಷೆ ಮಂದಹಾಸ ಮೂಡಿಸಿದೆ. ಆಗಸ್ಟ್ 20 ರ ಸಂಜೆಯವರೆಗೆ 6,65,810 ರೈತರು ಸರ್ವೆ ನಂ.ಪ್ಲಾಟ್ ಅಪ್ಲೋಡ್  ಮಾಡಿಕೊಂಡಿದ್ದಾರೆ. ಈ ಹಿಂದೆ ಮೊಬೈಲ್ ಆಪ್  ಬೆಳೆ ಸಮೀಕ್ಷೆಗೆ ಆಗಸ್ಟ್ 24 ಕೊನೆಯ ದಿನ ನಿಗದಿಪಡಿಸಲಾಗಿದ್ದು, ಮೊಬೈಲ್ ಆಪ್ ಬೆಳೆ ಸಮೀಕ್ಷೆ ಸಂಬಂಧ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದ್ದು, ರೈತರಿಗೆ ಇನ್ನಷ್ಟು ಅನುಕೂಲ ಕಲ್ಪಿಸಲು ಮುಖ್ಯಮಂತ್ರಿಗಳ ಸಲಹೆಯ ಮೇರೆಗೆ ಆಗಸ್ಟ್ 24 ರ ನಂತರವೂ ಇನ್ನೂ ಕೆಲವು ದಿನಗಳ ಕಾಲ ಸಮಯಾವಕಾಶ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಿರುವ ಬಗ್ಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ವಿಕಾಸಸೌಧದ ಕೃಷಿ ಸಚಿವರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಬೆಳೆ ಸಮೀಕ್ಷೆ ಉತ್ಸವದಂತಾಗಿದ್ದು, ಸಾರ್ವಜನಿಕ ಸಹಭಾಗಿತ್ವ ಮೊಬೈಲ್ ಆಪ್ ಬೆಳೆ ಸಮೀಕ್ಷೆಗೆ ಕಂಡುಬರುತ್ತಿರುವುದಾಗಿ ಹೇಳಿದರು.

ಅಗ್ರಿ ಸ್ಟಾರ್ಟಪ್: ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಆ.21 ರಂದು ವಿಕಾಸಸೌಧ ಸಮ್ಮೇಳನ ಸಭಾಂಗಣ ಕೊಠಡಿ ಸಂಖ್ಯೆ 419 ರಲ್ಲಿ ಕೃಷಿ ನವೋದ್ಯಮ( ಅಗ್ರಿ ಸ್ಟಾರ್ಟಪ್) ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. “ವರ್ಚುವಲ್ ಮೋಡ್ ಆನ್ಲೈನ್” ಮೂಲಕ ನಡೆಯಲಿರುವ ಸಮ್ಮೇಳನದಲ್ಲಿ ಸಾವಯವ ಹಾಗೂ ಸಿರಿಧಾನ್ಯಗಳು, ಆಹಾರ ಸಂಸ್ಕರಣಾ ಉದ್ದಿಮೆಗಳ ವ್ಯಾಪ್ತಿ ಹಾಗೂ ಅವಕಾಶಗಳು, ಆಧುನಿಕ ತಂತ್ರಜ್ಞಾನ ಆಧಾರಿತ ಕೃಷಿ ಕುರಿತು ಸಮ್ಮೇಳನದಲ್ಲಿ ಮಾಹಿತಿ ವಿನಿಯಮ, ಚರ್ಚೆ, ಕೃಷಿ ಕ್ಷೇತ್ರದಲ್ಲಿ ಸ್ಟಾರ್ಟಪ್ ನ ಮಹತ್ವ, ರೈತರಿಗಾಗುವ ಲಾಭ ಸೇರಿದಂತೆ ಮತ್ತಿತರ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳ 100 ಕ್ಕೂ ಹೆಚ್ಚು ಕೃಷಿ ಸ್ಟಾರ್ಟಪ್ ಉದ್ದಿಮೆಗಳು, ಹೂಡಿಕೆದಾರರು ಭಾಗವಹಿಸಲಿದ್ದಾರೆ.

2020 ನೇ ಸಾಲಿನಲ್ಲಿ 73 ಲಕ್ಷ ಹೆಕ್ಟೆರ್ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ  ಗುರಿ ಹೊಂದಲಾಗಿದ್ದು, ಜೂನ್ 1 ರಿಂದ ಆಗಸ್ಟ್  19  ರವರೆಗೆ 68.26ಲಕ್ಷ ಹೆಕ್ಟೆರ್ ಶೇ.95%ರಷ್ಟು ಬಿತ್ತನೆಯಾಗಿದೆ.  ಏಪ್ರಿಲ್ 1 ರಿಂದ ಆಗಸ್ಟ್ 20 ರವರೆಗೆ 6,78,055 ಯೂರಿಯಾ ಗೊಬ್ಬರಕ್ಕೆ ಬೇಡಿಕೆಯಿದ್ದು, 4,88163 ಮೆಟ್ರಿಕ್ ಟನ್ ಪೂರೈಕೆಯಾಗಿದ್ದು,  ಕಳೆದ ಬಾರಿಗಿಂತ  ಆರಿ 1,89,892 ಮೆಟ್ರಿಕ್ ಟನ್ ಯೂರಿಯಾ ಹೆಚ್ಚಿಗೆ ಸರಬರಾಜಾಗಿದೆ. ಏಪ್ರಿಲ್ 2020 ರಿಂದ ಆಗಸ್ಟ್ ಅಂತ್ಯದವರೆಗೆ 18,23,000  ಮೆಟ್ರಿಕ್ ಟನ್ ವಿವಿಧ ಗ್ರೇಡ್ ಗಳ ರಸಗೊಬ್ಬಕ್ಕೆ ಬೇಡಿಕೆಯಿದ್ದು, ಆಗಸ್ಟ್ 20 ರವರೆಗೆ ಅಂದರೆ ಇಂದಿನವರೆಗೆ 17,96,668 ಮೆಟ್ರಿಕ್ ಟನ್ ಪ್ರಮಾಣ ಸರಬರಾಜಾಗಿರುತ್ತದೆ. ಆಗಸ್ಟ್ ಮಾಹೆಯಲ್ಲಿ 1,77,000 ಮೆಟ್ರಿಕ್ ಟನ್ ಪ್ರಮಾಣದ ಯೂರಿಯಾ ರಸಗೊಬ್ಬರಕ್ಕೆ ಬೇಡಿಕೆಯಿದ್ದು ಇಲ್ಲಿಯವರೆಗೆ 1,14,194 ಮೆಟ್ರಿಕ್ ಟನ್ ಪ್ರಮಾಣದಲ್ಲಿ ರಸಗೊಬ್ಬರ ಸರಬರಾಜಾಗಿರುತ್ತದೆ. 62,806 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ಸರಬರಾಜು ಹಂತದಲ್ಲಿರುತ್ತದೆ.

ಆಗಸ್ಟ್ 21 ರ ಶುಕ್ರವಾರ ಕೇಂದ್ರದಿಂದ 51,600 ಮೆಟ್ರಿಕ್ ಗೊಬ್ಬರವನ್ನು ಕರ್ನಾಟಕಕ್ಕೆ ಪೂರೈಸುತ್ತಿರುವುದಾಗಿ ಕೇಂದ್ರದ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿರುವುದಾಗಿ ಕೃಷಿ ಸಚಿವರು ಮಾಹಿತಿ ನೀಡಿದರು.

ಪ್ರತಿ ಜಿಲ್ಲೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ವಿಜಿಲೆನ್ಸ್ ತಂಡಗಳನ್ನುರಚಿಸಿ ತಂಡದ ಸದಸ್ಯರು ರಸಗೊಬ್ಬರ ಪರಿವೀಕ್ಷಕರು ಅವರ ವ್ಯಾಪ್ತಿಯಲ್ಲಿ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿ ನಿಯಮಿತವಾಗಿ ಮಾದರಿಗಳನ್ನು ತೆಗೆದು ವಿಶ್ಲೇಷಣೆಗೊಳಪಿಸಿ ರೈತರಿಗೆ ಉತ್ತಮ ಗುಣಮಟ್ಟದ ಗೊಬ್ಬರ ಪೂರೈಕೆಯಾಗುವಂತೆ ನೋಡಿಕೊಳ್ಳಲಾಗುತ್ತದೆ. ಅಲ್ಲದೇ ಯಾವುದೇ ಕಾರಣಕ್ಕೂ ಹೆಚ್ಚಿನ ಬೆಲೆಯಲ್ಲಿ ರಸಗೊಬ್ಬರ ಮಾರಾಟವಾಗದಂತೆ ಪರಿವೀಕ್ಷಕರು ಕ್ರಮಕೈಗೊಳ್ಳುತ್ತಿದ್ದು, ಈ ಹಿನಲ್ಲೆಯಲ್ಲಿರಾಜ್ಯದ ದ ಹಲವೆಡೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದ 40 ಕ್ಕೂ ಹೆಚ್ಚಿನ ಚಿಲ್ಲರೆ ಮಾರಾಟಗಾರರ ಪರವಾನಿಗೆ ರದ್ದುಪಡಿಸಿರುವುದಾಗಿ ಬಿ.ಸಿ.ಪಾಟೀಲ್ ಹೇಳಿದರು.crop-survey-app-upload-date-extension

ಪ್ರತಿವಾರ ರಸಗೊಬ್ಬರ ತಯಾರಕ ಸಂಸ್ಥೆಗಳೊಂದಿಗೆ ರಸಗೊಬ್ಬರ ಸರಬರಾಜು ಕುರಿತು ಸಭೆ ಮತ್ತು ಪ್ರತಿದಿನ ರಸಗೊಬ್ಬರದ ರೇಕ್ ಕುರಿತು ಉಸ್ತುವಾರಿ ವಹಿಸಲಾಗಿದೆ. ಸರ್ಕಾರದಿಂದ ಪ್ರತಿಹಂಗಾಮಿನ ಪೂರ್ವದಲ್ಲಿಯೇ ರಸಗೊಬ್ಬರಗಳನ್ನು ಜಿಲ್ಲೆಗಳಿಂದ ನೀಡುವ ಬೇಡಿಕೆಯಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುತ್ತದೆ.ಕೇಂದ್ರದಿಂದ ಪ್ರತಿ ಮಾಹೆವಾರು ವಿವಿಧ ರಸಗೊಬ್ಬರಗಳನ್ನು ಹಂಚಿಕೆ ಮಾಡಲಾಗುತ್ತಿದ್ದು, ಪ್ರತಿ ತಿಂಗಳು ಹಂಚಿಕೆ ಮಾಡಲಾಗಿರುವ ರಸಗೊಬ್ಬರಗಳನ್ನು ಜಿಲ್ಲಾವಾರು ನಿಗದಿಪಡಿಸಿ, ಜಿಲ್ಲಾವಾರು ನಿಗದಿಪಡಿಸಿರುವ ರಸಗೊಬ್ಬರಗಳ ತಯಾರಿಕಾ ಸಂಸ್ಥೆಯವರಿಂದ ನೇರವಾಗಿ ಮಹಾಮಂಡಳ, ಸಹಕಾರ ಸಂಘಗಳು ಹಾಗೂ ಖಾಸಗಿ ಸಂಸ್ಥೆಯವರ ಮುಖಾಂತರ ಸಮರ್ಪಕ ರೀತಿಯಲ್ಲಿ ರೈತರಿಗೆ ವಿತರಿಸುತ್ತಿರುವುದಾಗಿ ಸಚಿವರು ವಿವರಿಸಿದರು.

Key words: Crop- Survey App -Upload Date- Extension.

website developers in mysore