ಮೂಕಾಭಿನಯದ ಮೂಲಕ ಸಹ ಆಟಗಾರರನ್ನು ರಂಜಿಸಿದ ಹಿಟ್ ಮ್ಯಾನ್ !

ಬೆಂಗಳೂರು, ಜೂನ್ 25, 2019 (www.justkannada.in): ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಟೀಂ ಬಸ್ ನಲ್ಲಿ ಭರಪೂರ ಮನರಂಜನೆ ನೀಡಿದ್ದಾರೆ !

ಮ್ಯಾಂಚೆಸ್ಟರ್ ನಲ್ಲಿ ನಾಳೆ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವಕಪ್ ಪಂದ್ಯಕ್ಕೆ ತಂಡದ ಸಹ ಆಟಗಾರರೊಂದಿಗೆ ಬಸ್ ಪ್ರಯಾಣ ಮಾಡುವಾಗ ರೋಹಿತ್ ಶರ್ಮಾ ಟೈಮ್ ಪಾಸ್ ಗಾಗಿ ದಿನೇಶ್ ಕಾರ್ತಿಕ್, ಕೋಚ್ ಆರ್ ಶ್ರೀಧರ್ ಜತೆಗೂಡಿ ಈ ಆಟ ಮೂಕಾಭಿನಯ ಮಾಡಿದ್ದಾರೆ !

ಈ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಪ್ರಕಟಿಸಿದ್ದಾರೆ. ಇನ್ನೊಂದೆಡೆ ನಾಯಕ ವಿರಾಟ್ ಕೊಹ್ಲಿ ಕೂಡಾ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಮ್ಯಾಂಚೆಸ್ಟರ್ ಗೆ ಸಾಗುತ್ತಿರುವ ಫೋಟೋ ಪ್ರಕಟಿಸಿದ್ದಾರೆ.