ಮಂಗಳೂರು ಮೂಲಕ ನಟಿ ಜತೆ ಸಪ್ತಪದಿ ತುಳಿಯಲು ಮನೀಶ್ ಪಾಂಡೆ ರೆಡಿ

Promotion

ಬೆಂಗಳೂರು, ಅಕ್ಟೋಬರ್ 11, 2019 (www.justkannada.in): ಕ್ರಿಕೆಟಿಗ ಮನೀಶ್ ಪಾಂಡೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಮನೀಶ್ ಜೊತೆ ಸಪ್ತಪದಿ ತುಳಿಯಲು ಸಿದ್ಧವಾಗಿರುವ ನಟಿ ಕುಡ್ಲದ ಸುಂದರಿ ಆಶ್ರಿತಾ ಶೆಟ್ಟಿ. ಈ ಮೂಲಕ ದಕ್ಷಿಣ ಭಾರತದ ನಟಿಯನ್ನು ಕೈ ಹಿಡಿಯುತ್ತಿದ್ದಾರೆ ಮನೀಶ್ ಪಾಂಡೆ.

ಮಂಗಳೂರು ಮೂಲಕ ಆಶ್ರಿತಾ ಹುಟ್ಟಿ ಬೆಳೆದಿದ್ದೆಲ್ಲ ಮಾಯ ನಗರಿ ಮುಂಬೈನಲ್ಲಿ. ಫ್ಯಾಶನ್ ಶೋಗಳಲ್ಲಿ ಭಾಗಿಯಾಗುತ್ತಿದ್ದ ಆಶ್ರಿತಾ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿದ್ದರು.

2012ರಲ್ಲಿ ತುಳು ಚಿತ್ರ ತೆಲಿಕೆದ ಬೊಳ್ಳಿಯ ಮೂಲಕ ಸಿನಿಮಾ ಲೋಕಕ್ಕೆ ಕಾಲಿಟ್ಟಿದ್ದಾರೆ. ನಂತರ ನಟ ಸಿದ್ಧಾರ್ಥ್ ಜೊತೆ ಉದಯಂ ಎನ್ ಎಚ್-4, ಒರು ಕನ್ನಿಯಮ್ ಮೂನ್ ಕಲವಾನಿಕಾಲುಮ್, ಇಂದ್ರಜಿತ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.