ನಿವೃತ್ತಿ ಬಳಿಕ ಸಿನಿಮಾ ನಿರ್ಮಾಣದತ್ತ ಕೂಲ್ ಕ್ಯಾಪ್ಟನ್ ಚಿತ್ತ

ಬೆಂಗಳೂರು, ಸೆಪ್ಟೆಂಬರ್ 09, 2019 (www.justkannada.in): ಕೂಲ್ ಕ್ಯಾಪ್ಟನ್ ಎಂ.ಎಸ್‌.ಧೋನಿ ಸಿನಿಮಾ ಜಗತ್ತಿಗೆ ಕಾಲಿಡಲಿದ್ದಾರೆ.

ಹೌದು. ನಿವೃತ್ತಿ ಬಳಿಕ ಧೋನಿ ಚಿತ್ರರಂಗದಲ್ಲೇ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ. ಸಿನಿಮಾ ನಿರ್ಮಾಣದಲ್ಲಿ ಅವರು ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಈ ಕುರಿತು ಅವರು ಕೆಲ ನಿರ್ದೇಶಕರ ಜೊತೆ ಮಾತುಕತೆಯನ್ನೂ ನಡೆಸಿದ್ದಾರೆ. ತಮ್ಮದೇ ಸ್ವಂತ ಸಿನಿಮಾ ನಿರ್ಮಾಣ ಸಂಸ್ಥೆಯೊಂದನ್ನು ರೂಪಿಸುವ ಯೋಚನೆಯೂ ಅವರಿಗಿದೆ.