ಕ್ರಿಕೆಟ್: ಟೀಂ ಇಂಡಿಯಾ ಆಟಗಾರರ ಜೆರ್ಸಿ ಮೇಲೆ ಬೈಜೂಸ್ ಲೋಗೋ !

Promotion

ಬೆಂಗಳೂರು, ಜುಲೈ 25, 2019 (www.justkannada.in): ಬೆಂಗಳೂರು ಮೂಲದ ಶಿಕ್ಷಣ ತಂತ್ರಜ್ಞಾನ ಮತ್ತು ಆನ್‌ಲೈನ್ ಟ್ಯುಟೋರಿಯಲ್ ಸಂಸ್ಥೆಯಾದ ಬೈಜೂಸ್ ಲೊಗೋ ಟೀಂ ಇಂಡಿಯಾ ಕ್ರಿಕೆಟ್ ಆಟಗಾರರ ಜೆರ್ಸಿ ಮೇಲೆ ಕಾಣಿಸಲಿದೆ.

2017ರಲ್ಲಿ ತಾನು ಖರೀದಿಸಿದ ಜೆರ್ಸಿ ಹಕ್ಕು ಅತ್ಯಂತ ದುಬಾರಿ ಮತ್ತು ಸುಸ್ಥಿರವಲ್ಲ ಎಂದು ಮನವರಿಕೆಯಾದ ಹಿನ್ನೆಲೆಯಲ್ಲಿ ಆ ಸ್ಥಾನದಿಂದ ಹಿಂದೆ ಸರಿಯಲು ಒಪ್ಪೋ ನಿರ್ಧರಿಸಿದೆ.

ಹೀಗಾಗಿ ಜೆರ್ಸಿ ಹಕ್ಕನ್ನು ಬೈಜೂಸ್‌ಗೆ ಮರು ಹಂಚಿಕೆ ಮಾಡಲಾಗುತ್ತದೆ. ಇದೀಗ ಈ ಸ್ಥಾನವನ್ನು ಬೆಂಗಳೂರು ಮೂಲದ ಶಿಕ್ಷಣ ತಂತ್ರಜ್ಞಾನ ಮತ್ತು ಆನ್‌ಲೈನ್ ಟ್ಯುಟೋರಿಯಲ್ ಸಂಸ್ಥೆಯಾದ ಬೈಜೂಸ್ ಅಲಂಕರಿಸಲಿದೆ.