ಕ್ರಿಕೆಟ್: ಇಂದು ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ-20 ಪಂದ್ಯ

kannada t-shirts

ಬೆಂಗಳೂರು, ಸೆಪ್ಟೆಂಬರ್ 28, 2022 (www.justkannada.in): ಭಾರತ-ಸೌತ್ ಆಫ್ರಿಕಾ ನಡುವಣ ಮೊದಲ ಟಿ-20 ಸರಣಿಯ ಪಂದ್ಯವು ತಿರುವನಂತಪುರಂದಲ್ಲಿನ ಗ್ರೀನ್​ಫೀಲ್ಡ್​ ಇಂಟರ್​ನ್ಯಾಷನಲ್​ ಮೈದಾನದಲ್ಲಿ ನಡೆಯಲಿದೆ.

ಹೌದು. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.  ಪಂದ್ಯಕ್ಕೆ ಇದೀಗ ಮಳೆಯ ಭೀತಿ ಎದುರಾಗಿದೆ.

ಹವಾಮಾನ ವರದಿ ಪ್ರಕಾರ ತಿರುವನಂತಪುರಂದ ಸುತ್ತ ಮುತ್ತಲಿನಲ್ಲಿ ಮೋಡ ಕವಿದ ವಾತಾವಣರವಿದ್ದು, ಹೀಗಾಗಿ ಸಣ್ಣ ಪ್ರಯಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಇದಾಗ್ಯೂ ಸೀಮಿತ ಓವರ್​ಗಳಲ್ಲಿ ಪಂದ್ಯ ನಡೆಯುವುದು ಖಚಿತ.

ಮಳೆಯ ಸಾಧ್ಯತೆ ಹಗಲಿನಲ್ಲಿ 17% ಇದ್ದರೆ, ರಾತ್ರಿಯಲ್ಲಿ 21% ಇದೆ. ಹೀಗಾಗಿ ಮಳೆಯಾದರೂ ಸೀಮಿತ ಓವರ್​ಗಳಲ್ಲಿ ಪಂದ್ಯವನ್ನು ಪೂರ್ಣಗೊಳಿಸಲು ಸಮಯವಕಾಶ ಇರಲಿದೆ.

website developers in mysore