ನೆರೆ ಪರಿಹಾರ ವಿತರಣೆ ಮೇಲ್ವಿಚಾರಣೆಗೆ ಜಂಟಿ ಸದನ ಸಮಿತಿ ರಚಿಸಿ-ಮಾಜಿ ಸಚಿವ ಹೆಚ್.ಕೆ ಪಾಟೀಲ್ ಒತ್ತಾಯ…

ಬೆಂಗಳೂರು,ಅ,11,2019(www.justkannada.in):  ನೆರೆ ಸಂತ್ರಸ್ತರಿಗೆ ನೆರೆ ಪರಿಹಾರ ವಿತರಣೆಗಾಗಿ ಜಂಟಿ ಸದನ ಸಮಿತಿ ರಚಿಸಿ ಎಂದು ಕಾಂಗ್ರೆಸ್ ಶಾಸಕ ಹೆಚ್.ಕೆ ಪಾಟೀಲ್ ಸರ್ಕಾರಕ್ಕೆ ಆಗ್ರಹಿಸಿದರು.

ವಿಧಾನಸಭೆ ಕಲಾಪದಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಹೆಚ್.ಕೆ ಪಾಟೀಲ್ ನೆರೆ ಪರಿಹಾರ ಜನರಿಗೆ ತಲುಪುವ ನಿಟ್ಟಿನಲ್ಲಿ ಜಂಟಿ ಸದನ ಸಮಿತಿ ರಚಿಸಬೇಕು. ಎರಡು ಸದನಗಳ ಸದಸ್ಯರು ಸಮಿತಿಯಲ್ಲಿ ಇರಬೇಕು. ಇದರಿಂದ ನೆರೆ ಪರಿಹಾರ ವಿತರಣೆ ಮೇಲ್ವಿಚಾರಣೆಗೆ ಅನುಕೂಲವಾಗುತ್ತದೆ. ಹಾಗೆಯೇ  ರಾಷ್ಟ್ರೀಯ ವಿಪತ್ತು ಎಂಬ ನಿರ್ಣಯವನ್ನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇನ್ನು ಅಧಿವೇಶನವನ್ನ ಬೆಳಗಾವಿಯಿಂದ ಬೆಂಗಳೂರಿಗೆ ಶಿಫ್ಟ್ ಮಾಡಿದ್ದಕ್ಕೆ ಲೇವಡಿ ಮಾಡಿದ ಹೆಚ್.ಕೆ ಪಾಟೀಲ್, ಬೆಳಗಾವಿಯ ಅಧಿವೇಶನ ಬೆಂಗಳೂರಿನಲ್ಲಿ ಮಾಡುತ್ತಿರುವುದು ಏಕೆ..? ನೆರೆ ಸಂತ್ರಸ್ತರ ಭಯದಿಂದ ಇಲ್ಲಿ ಮಾಡುತ್ತಿದ್ದೀರಾ..? ಎಂದು ತರಾಟೆ ತೆಗೆದುಕೊಂಡರು.

Key words: Create – Joint House Committee -Oversee -Neighborhood -Relief –Distributior-Former minister- HK Patil