ಕೋವಿಡ್ ಟೆಸ್ಟ್ ಗಳನ್ನು ಬೇಕಾಬಿಟ್ಟಿ ಮಾಡಲಾಗುತ್ತಿದೆ : ಸಂಸದ ಡಿ.ಕೆ.ಸುರೇಶ್ ಆರೋಪ

ಬೆಂಗಳೂರು,ಏಪ್ರಿಲ್,18,2021(www.justkananda.in) ಕೋವಿಡ್ ಟೆಸ್ಟ್ ಗಳನ್ನು ಬೇಕಾಬಿಟ್ಟಿ ಮಾಡಲಾಗುತ್ತಿದ್ದು, ಕೆಲವೆಡೆ ಪಾಸಿಟಿವ್ ಬಂದರೆ, ಮತ್ತೆ ಕೆಲವೆಡೆ ನೆಗೆಟಿವ್ ಬರುತ್ತಿವೆ. ಸರ್ಕಾರದಲ್ಲಾಗಲಿ, ಅಧಿಕಾರಿಗಳಲ್ಲಾಗಲೀ ಯಾವುದೇ ಸಮನ್ವಯತೆ ಇಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ.

jkಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೊಬ್ಬರೂ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ತಮ್ಮ ಸ್ವಾರ್ಥ, ಹಣದ ಆಸೆಗೆ ಜನರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ರೆಮಿಡಿಸಿವಿರ್ ಸಂಗ್ರಹಕ್ಕೆ ಪ್ರಧಾನಿಗಳು ಸೂಚಿಸಿದ್ದರೂ ಚುಚ್ಚುಮದ್ದು ಕೊರತೆಯಾಗಿದೆ. ಸರ್ಕಾರ ಏನು ಮಾಡುತ್ತಿದೆ. ದಿನೇ, ದಿನೇ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರ ಕೊಡುತ್ತಿರುವ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಸೋಂಕಿತರ ಸಂಖ್ಯೆ ದ್ವಿಗುಣ ಗೊಳ್ಳುತ್ತಿದೆ ಆದರೂ, ಸರ್ಕಾರ ಕಣ್ಣೊರೆಸುವ ತಂತ್ರ ಮಾಡುತ್ತಿದೆ ಎಂದು ಟೀಕಿಸಿದರು.

ಸರ್ಕಾರದ ಬೇಜವಾಬ್ದಾರಿತನವೇ ಇದಕ್ಕೆಲ್ಲ‌ ಕಾರಣ

ಖಾಸಗಿ ಆಸ್ಪತ್ರೆಗಳ‌ ಮೇಲೂ ರಾಜ್ಯ ಸರ್ಕಾರಕ್ಕೆ ನಿಯಂತ್ರಣವಿಲ್ಲ. ಕಳೆದ ಬಾರಿ ಕೊರೊನ ವೇಳೆ ಆಸ್ಪತ್ರೆಗಳಿಗೆ ಕೊಡಬೇಕಿದ್ದ ಬಾಕಿ ಹಣವನ್ನು ಇನ್ನೂ ಕೊಟ್ಟಿಲ್ಲ. ಬಾಕಿ ಉಳಿಸಿಕೊಂಡಿದ್ದು ಏಕೆ? ಈಗ ಹಾಸಿಗೆ ಕೊಡಿ ಎಂದು ಕೇಳಿದರೆ ಯಾರು ಸಹಕಾರ ಕೊಡುತ್ತಾರೆ? ಸರ್ಕಾರದ ಬೇಜವಾಬ್ದಾರಿತನವೇ ಇದಕ್ಕೆಲ್ಲ‌ ಕಾರಣ ಎಂದು ದೂರಿದರು.

ನೈಟ್ ಕರ್ಫ್ಯೂ ಅತ್ಯಂತ ಅವೈಜ್ಞಾನಿಕCovid-tests-Irresponsibly-Doing-MP-D.K.Suresh-accused

ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಗೌರವಯುತ ಶವ ಸಂಸ್ಕಾರಕ್ಕೂ ಬಿಜೆಪಿ ಸರ್ಕಾರ ಅವಕಾಶ ಇಲ್ಲದಂತೆ ಮಾಡಿವೆ. ನೈಟ್ ಕರ್ಫ್ಯೂ ಅತ್ಯಂತ ಅವೈಜ್ಞಾನಿಕ. ಹಗಲಿನಲ್ಲಿ ಓಡಾಡುವುದಕ್ಕೆ ಬಿಗಿ ನಿಯಮಗಳನ್ನು ರೂಪಿಸಬೇಕು. ಬಂದೋ ಬಸ್ತ್ ಮಾಡಬೇಕು. ಸುಮ್ಮನೆ ಏನೋ ‌ಮಾಡುತ್ತಿದ್ದೇವೆ ಎಂದು ತೋರಿಸಿಕೊಳ್ಳಲು ಸರ್ಕಾರ ಹೀಗೆ ಮಾಡುತ್ತಿದೆ ಎಂದು ಅಸಮಾಧಾನವ್ಯಕ್ತಡಿಸಿದರು.

key words : Covid-tests-Irresponsibly-Doing-MP-D.K.Suresh-accused