ಮೆಡಿಕಲ್ ಸ್ಟೋರ್ ಗಳಲ್ಲಿ ಕೋವಿಡ್ ಪರೀಕ್ಷಾ ಕಿಟ್ ಮಾರಾಟ ಮಾಡಿದ್ರೆ ಸೂಕ್ತ ಕ್ರಮ: ಮಾಲೀಕರಿಗೆ ಎಚ್ಚರಿಕೆ…

ಬೆಂಗಳೂರು,ಜು,18,2020(www.justkannada.in):  ಮೆಡಿಕಲ್ ಸ್ಟೋರ್ ಗಳಲ್ಲಿ ಕೋವಿಡ್ ಪರೀಕ್ಷಾ ಕಿಟ್ ಮಾರಾಟ ಮಾಡಿದ್ರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಔಷಧಿ ನಿಯಂತ್ರಣ ಇಲಾಖೆ ಮೆಡಿಕಲ್ ಸ್ಟೋರ್ ಮಾಲೀಕರಿಗೆ ಎಚ್ಚರಿಕೆ ನೀಡಿದೆ.jk-logo-justkannada-logo

ಮೆಡಿಕಲ್ ಸ್ಟೋರ್ ಗಳಲ್ಲಿ  ರ್ಯಾಪಿಡ್ ಆ್ಯಂಟಿ ಟೆಸ್ಟ್ ಕಿಟ್ ಗಳ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಸ್ವಯಂ ಕೋವಿಡ್ ಪರೀಕ್ಷಿಸಿಕೊಳ್ಳುವ ಕಿಟ್ ಗಳ ಮಾರಾಟ ಮಾಡದಂತೆ ಮೆಡಿಕಲ್ ಸ್ಟೋರ್ ಮಾಲೀಕರಿಗೆ ಔಷಧಿ ನಿಯಂತ್ರಣ ಇಲಾಖೆ ಸೂಚನೆ ನೀಡಿದೆ.covid-test-kit-medical-stores-sell-warning

ಕೆಲ ಮೆಡಿಕಲ್ ಸ್ಟೋರ್ ಗಳಲ್ಲಿ ರ್ಯಾಪಿಡ್ ಆ್ಯಂಟಿ ಟೆಸ್ಟ್ ಕಿಟ್ ಮಾರಾಟ ಮಾಡುವ ಬಗ್ಗೆ ಮಾಹಿತಿ ಇದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ‌ ಈ ಕಿಟ್ ಬಳಕೆ ಅಪಾಯಕಾರಿ. ಜನರ ಹಿತದೃಷ್ಟಿಯಿಂದ ಸಾರ್ವಜನಿಕವಾಗಿ ಈ ಕಿಟ್ ಮಾರಾಟ ಸಲ್ಲದು. ಇಂತಹ ಕಿಟ್ ಗಳ ಮಾರಾಟ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು  ಔಷಧಿ ನಿಯಂತ್ರಣ ಇಲಾಖೆ ಆದೇಶ ಹೊರಡಿಸಿದೆ.

Key  words: covid test kit – medical stores- sell-Warning