‘ಮನೆಯಲ್ಲಿ ಕೋವಿಡ್ ಪರಿಸ್ಥಿತಿ ಉಂಟಾಗಿದೆ’: ಬಾಲಿವುಡ್ ಬಿಗ್ ಬಿ ಟ್ವೀಟ್

Promotion

ಬೆಂಗಳೂರು, ಜನವರಿ 06, 2022 (www.justkannada.in): ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮನೆಯ ಸಿಬ್ಬಂದಿಯೊಬ್ಬರು ಕೊರೊನಾ ಪಾಸಿಟಿವ್ ಆಗಿದ್ದಾರೆ.

ಹೌದು, ಅಮಿತಾಬ್ ಬಚ್ಚನ್ ಮನೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಸಿಬ್ಬಂದಿ ಇದ್ದು, ಅವರಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಆಗಿವೆ ಎಂಬ ಸುದ್ದಿ ಹೊರಬಿದ್ದಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿದ್ದ ಅಮಿತಾಬ್ ಬಚ್ಚನ್, ‘ಮನೆಯಲ್ಲಿ ಕೋವಿಡ್ ಪರಿಸ್ಥಿತಿ ಉಂಟಾಗಿದೆ’ ಎಂದು ತಿಳಿಸಿದ್ದರು. ಸೋಂಕು ಕಾಣಿಸಿಕೊಂಡಿದ್ದು ಯಾರಿಗೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಇದೀಗ ಅದು ಯಾರಿಗೆ ಎಂಬುದು ಖಚಿತವಾಗಿದೆ.

ಮುಂಬೈನ ಜುಹು ಏರಿಯಾದಲ್ಲಿ ಅಮಿತಾಬ್ ಬಚ್ಚನ್ ಎರಡು ಬಂಗ್ಲೆಗಳನ್ನು ಹೊಂದಿದ್ದಾರೆ. ‘ನಿರೀಕ್ಷಣಾ’ ಹಾಗೂ ‘ಜಲ್ಸಾ’ ಎರಡೂ ಬಂಗಲೆಗಳಲ್ಲಿ ಒಟ್ಟು 31 ಮಂದಿ ಸಿಬ್ಬಂದಿ ಕೆಲಸ ಮಾಡುತ್ತಾರೆ.