ಕೋವಿಡ್‌ ನಿಯಮ ಉಲ್ಲಂಘನೆ: 4 ಬಸ್‌ಗಳ ಜಫ್ತು ಮಾಡಿದ ಆರ್‌ಟಿಓ ಅಧಿಕಾರಿಗಳು

ಬೆಂಗಳೂರು, ಮೇ 09, 2021 (www.justkannada.in): ಕೋವಿಡ್‌ ನಿಯಮಾವಳಿಗಳನ್ನು ಉಲ್ಲಂಘಿಸಿ ಕಳ್ಳ ಮಾರ್ಗದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ನಾಲ್ಕು ಬಸ್‌ಗಳನ್ನು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತರಾದ ನರೇಂದ್ರ ಹೋಳ್ಕರ್‌ ನೇತೃತ್ವದ ತಂಡ ದಾಳಿ ಮಾಡಿ ಜಫ್ತು ಮಾಡಿದೆ.

ಕೋವಿಡ್‌ ನಿಯಮಾವಳಿಗಳ ಪ್ರಕಾರ ಯಾವುದೇ ಬಸ್‌ಗಳು ಕಾರ್ಯಾರಣೆ ಮಾಡುವಂತಿಲ್ಲ. ಆದರೆ, ಈ ನಾಲ್ಕೂ ಖಾಸಗಿ ಬಸ್‌ಗಳು ಈ ನಿಯಮಾವಳಿಯನ್ನು ಉಲ್ಲಂಘಿಸಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದರು. ಬಾಗೇಪಲ್ಲಿ, ಅತ್ತಿಬೆಲೆ ಮತ್ತು ಎಸ್ಟಿಮ್‌ ಮಾಲ್‌ ಬಳಿ ದಾಳಿ ನಡೆಸಿ ಈ ಬಸ್‌ಗಳನ್ನು ಜಫ್ತು ಮಾಡಲಾಗಿದೆ.

ಬಾಗೇಪಲ್ಲಿಯಲ್ಲಿ ಮೋಟಾರ್‌ ವಾಹನ ನಿರೀಕ್ಷರಾದ ತಿಪ್ಪೇಸ್ವಾಮಿ ಸಿ, ವೆಂಕಟೇಶ್‌, ಜಿ. ಎನ್‌ ಸುರೇಶ್‌ ತಂಡ ಕಾರ್ಯಾಚರಣೆ ನಡೆಸಿ ಮೂರು ಬಸ್‌ ಗಳನ್ನು ವಶಪಡಿಸಿಕೊಂಡಿದ್ದಾರೆ. ಎಆರ್‌ಟಿಓ ರಾಜಣ್ಣ, ಕೃಷ್ಣಾನಂದ – ಇನ್ಸಪೆಕ್ಟರ್‌ ರಾಜ್‌ ಕುಮಾರ್‌, ಸುಧಾಕರ್‌, ರಾಜೇಶ್‌, ಜಗದೀಶ್‌ ಮತ್ತು ಜಯಣ್ಣ ಅವರನ್ನೊಳಗೊಂಡ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಾತ್ರಿ ವೇಳೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಒಂದು ಬಸ್ಸನ್ನು ವಶಪಡಿಸಿಕೊಂಡಿದ್ದಾರೆ.

ನೇಪಾಳಕ್ಕೆ ತೆರಳಲು ಸಿದ್ದವಾಗಿದ್ದ ಬಸ್ಸಿನ ಪ್ರಯಾಣಿಕರನ್ನು ಹಿಂದಕ್ಕೆ ಕಳುಹಿಸಿಲಾಗಿದೆ. ಇನ್ನೂ ಮೂರು ಬಸ್ ಗಳಲ್ಲಿದ್ದ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಿ ಅವರ ಊರುಗಳಿಗೆ ತಲುಪಿಸಲಾಗಿದೆ.

(ಸಾಂದರ್ಭಿಕ ಚಿತ್ರ)