ಬೆಂಗಳೂರಿನಲ್ಲಿ ಶಾಲೆ ಓಪನ್ ಗೆ ಗ್ರೀನ್ ಸಿಗ್ನಲ್: ಜ.31ರಿಂದ ನೈಟ್ ಕರ್ಫ್ಯೂ ರದ್ದು ಸೇರಿ ಹಲವು ನಿರ್ಣಯ ಕೈಗೊಂಡ ಸರ್ಕಾರ.

ಬೆಂಗಳೂರು,ಜನವರಿ,29,2022(www.justkannada.in): ಕೊರೋನಾ ಹೆಚ್ಚಾದ ಹಿನ್ನೆಲೆ ರಾಜ್ಯದಲ್ಲಿ ಜಾರಿ ಮಾಡಲಾಗಿದ್ದ ನೈಟ್ ಕರ್ಫ್ಯೂವನ್ನ ಜನವರಿ 31 ರಿಂದ ರದ್ದುಗೊಳಿಸಲಾಗಿದೆ.

ಕೋವಿಡ್ ನಿರ್ವಹಣೆ ಮತ್ತು ನಿಯಮ ಸಡಿಲಿಕೆ ಸಂಬಂಧ ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್,  ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯಾದ್ಯಂತ ಜಾರಿಗೊಳಿಸಲಾಗಿದ್ದ ನೈಟ್ ಕರ್ಪ್ಯೂವನ್ನು  ರದ್ದುಪಡಿಸಲಾಗಿದೆ. ಜನವರಿ 31 ರಿಂದ ನೈಟ್ ಕರ್ಫ್ಯೂ ಇರುವುದಿಲ್ಲ. ಹಾಗೆಯೇ ಸೋಮವಾರದಿಂದ ಬೆಂಗಳೂರಿನಲ್ಲಿ ಎಲ್ಲಾ ಶಾಲೆಗಳು ಪುನಾರಂಭಗೊಳ್ಳಲಿವೆ. ಇದಲ್ಲದೇ ಹೋಟೆಲ್, ರೆಸ್ಟೋರೆಂಟ್, ಪಬ್ ಗಳಲ್ಲಿನ ಶೇ.50ರ ಮಿತಿಯನ್ನು ವಾಪಾಸ್ ಪಡೆಯಲಾಗಿದೆ ಎಂದು ತಿಳಿಸಿದರು.

ಆದ್ರೇ ಸಿನಿಮಾ ಮಂದಿರಗಳಲ್ಲಿ ಶೇ.50ರ ಮಿತಿಯನ್ನು ಮುಂದುವರೆಸಲಾಗಿದೆ. ರಾಜ್ಯದಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಸೀಟಿಂಗ್ ಕ್ಯಾಪಸಿಟಿ ಮಾತ್ರ ಭರ್ತಿ ಮಾಡಬೇಕು.  ಹೋಟೆಲ್ ಪಬ್ ಬಾರ್ ರೆಸ್ಟೋರೆಂಟ್  ತೆರೆಯಲು ಅನುಮತಿ ನೀಡಲಾಗಿದೆ. ಮಸೀದಿ ಮಂದಿರ ಚರ್ಚ್ ಗಳಲ್ಲಿ ಸೇವೆ ಆರಂಭಕ್ಕೆ ಅವಕಾಶ, ಶೇ. 50ರಷ್ಟು ಜನ ಸೇರಲು ಅವಕಾಶ. ಜಾತ್ರೆ ಪ್ರತಿಭಟನೆ ರ್ಯಾಲಿ ಸಮಾರಂಭಗಳಿಗೆ ನಿರ್ಬಂಧ ಮುಂದುವರೆಯಲಿದೆ. ಸರ್ಕಾರಿ ಕಚೇರಿಗಳಲ್ಲಿ  ಶೇ.100ರಷ್ಟು ಹಾಜರಾತಿ, ಜಿಮ್ ಈಜುಕೊಳದಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಸಚಿವ ಆರ್.ಅಶೋಕ್ ಮಾಹಿತಿ ನೀಡಿದರು.

Key words: covid-rules-minister-R Ashok

ENGLISH SUMMARY…

Green signal to open schools in Bengaluru: State Govt. lifts night crufew
Bengaluru, January 29, 2022 (www.justkannada.in): The State Government has withdrawn the night curfew from January 31.
A meeting was held today in Bengaluru under the leadership of Chief Minister Basavaraj Bommai regarding the COVID situation and relaxing rules. Revenue Minister R. Ashok addressed a press meet after the meeting and informed that the night curfew will be lifted across the state from January 31. He also informed that all the schools will be started from Monday in Bengaluru. The 50% rule imposed on hotels, restaurants, pubs, and bars has also been relaxed.
However, the 50% seating capacity in cinema halls will continue for some more time. All the government buses will ply only as per the seating capacity. Permission has been given to conduct religious programs in temples, masjids, and churches with 50% capacity. Restriction over rallies and public programs has continued. Gyms and swimming pools can function with 50% capacity.
Keywords: COVID/ situation/ meeting/ rules relaxed