ಕೋವಿಡ್ ಬಗ್ಗೆ ಆತಂಕ  ಬೇಡ: ಮುನ್ನೆಚ್ಚರಿಕೆ ಕ್ರಮ ಅನುಸರಿಸಿ- ಜನತೆಗೆ ಸಿಎಂ ಬೊಮ್ಮಾಯಿ ಮನವಿ.

Promotion

ಹುಬ್ಬಳ್ಳಿ,ಡಿಸೆಂಬರ್,24,2022(www.justkannada.in): ಕೋವಿಡ್ ಬಗ್ಗೆ ಜನ ಆತಂಕಪಡುವ ಅಗತ್ಯವಿಲ್ಲ. ಮುನ್ನೆಚ್ಚರಿಕಾ ಕ್ರಮವನ್ನ ಅನುಸರಿಸಬೇಕು ಎಂದು ರಾಜ್ಯದ ಜನತೆಗೆ ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಮುಂಜಾಗ್ರತಾ ಕ್ರಮವಾಗಿ ಬೂಸ್ಟರ್ ಹಾಕಿಸಿಕೊಳ್ಳುವಂತೆ  ಹೇಳಲಾಗಿದೆ. ಬಸ್, ರೈಲೆ ನಿಲ್ದಾಣ ಏರ್ ಪೊರ್ಟ್ ಕಟ್ಟಚ್ಚರ ವಹಿಸಲಾಗುತ್ತಿದೆ. ಈಗಾಗಲೇ ಟೆಸ್ಟಿಂಗ್ ಹೆಚ್ಚಳಕ್ಕೆ ಸೂಚನೆ ನೀಡಿದ್ದಾರೆ ಎಂದರು.

ಹೊಸ ವರ್ಷಕ್ಕೆ ಗೈಡ್ ಲೈನ್ ಜಾರಿ ಬಗ್ಗೆ ಚರ್ಚಿಸುತ್ತೇವೆ . ಈ ಬಗ್ಗೆ ಸಚಿವ ಆರ್. ಅಶೋಕ್ ಡಾ.ಕೆ.ಸುಧಾಕರ್ ಮಾಹಿತಿ ಪಡೆಯುತ್ತಾರೆ. ಅಗತ್ಯ ಸೇವೆ ಕಲ್ಪಿಸಲು ಸೂಚನೆ ನೀಡಲಾಗಿದೆ. ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಅರೋಗ್ಯ ಸಚಿವರಿಗೆ ತಿಳಿಸಲಾಗಿದೆ. ಕೋವಿಡ್ ಬಗ್ಗೆ ಜನ ಆತಂಕಪಡು ಅಗತ್ಯವಿಲ್ಲ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು ಎಂದು ತಿಳಿಸಿದರು.

Key words: covid-precautionary- action-CM Bommai