ಕೋವಿಡ್ ಸಂಕಷ್ಟ : ಸರ್ಕಾರ ಹಾಗೂ ಮೈಸೂರು ಜಿಲ್ಲಾಡಳಿತದ ವಿರುದ್ಧ ಶಾಸಕ ಸಾ.ರಾ ಮಹೇಶ್ ಗುಡುಗು…

kannada t-shirts

ಮೈಸೂರು,ಏಪ್ರಿಲ್,28,2021(www.justkannada.in):   ರಾಜ್ಯದಲ್ಲಿ ಕೋವಿಡ್ ಸಂಕಷ್ಟ, ವೆಂಟಿಲೇಟರ್ ಸಮಸ್ಯೆ ಕುರಿತು ಸರ್ಕಾರ ಮತ್ತು ಮೈಸೂರು ಜಿಲ್ಲಾಡಳಿತ ವಿರುದ್ಧ ಶಾಸಕ ಸಾ.ರಾ ಮಹೇಶ್ ಗುಡುಗಿದ್ದಾರೆ.jk

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಸಾ.ರಾ ಮಹೇಶ್,  ಕೋವಿಡ್ ಬಂದು 1 ವರ್ಷ ಆಗಿದೆ. ಒಂದು ವರ್ಷ ಸರ್ಕಾರ ಏನು ಮಾಡುತಿತ್ತು ? ನಿಮಗೆ ಮನಸಾಕ್ಷಿ ಇಲ್ಲವಾ ?. ಒಂದು ವರ್ಷದಿಂದ ನೀವು ಜಿಲ್ಲಾಡಳಿತ ಏನು ಕ್ರಮ ತೆಗೆದುಕೊಂಡಿರಿ. ಎಷ್ಟು ಸಿಬ್ಬಂದಿ ನೇಮಕ ಮಾಡಿಕೊಂಡಿದ್ದೀರಾ ? ಎಷ್ಟು ವೆಂಟಿಲೇಟರ್ ತಂದಿದ್ದೀರಾ ಲೆಕ್ಕ ಕೊಡಿ ಎಂದು ಆಗ್ರಹಿಸಿದರು.

ಮೈಸೂರಿನಲ್ಲಿ ಒಟ್ಟು 150 ವೆಂಟಿಲೇಟರ್ ಇದೆ. ಮೆಡಿಕಲ್‌ ಕಾಲೇಜಿನಲ್ಲಿ 30 ತಾಲ್ಲೂಕಿನಲ್ಲಿ 5 ವೆಂಟಿಲೇಟರ್ ಇದೆ. ಅವು ಸಹಾ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇರುವ ವೆಂಟಿಲೇಟರ್ ನಿರ್ವಹಣೆಗೂ ಜನರಿಲ್ಲ. ಇರುವ ವೆಂಟಿಲೇಟರ್‌ ಗಳು ಉಪಯೋಗ ಆಗುತ್ತಿಲ್ಲ ರೆಮಿಡಿಸಿವಿರ್ 5 ಸಾವಿರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ ಕಡಿಮೆ ಸಂಖ್ಯೆ ಪೂರೈಕೆ‌ ಮಾಡಲಾಗಿದೆ. ಕೇಳಿದರೆ ಅದು ಅವಶ್ಯಕತೆ ಇಲ್ಲ ಅಂತಾರೆ. ಆರಂಭದ ಹಂತದಲ್ಲಿ ರೆಮಿಡಿಸಿಯರ್ ಅತ್ಯವಶ್ಯಕ. ನಾನು ವೈದ್ಯರ ಬಳಿ ಮಾತಾನಾಡಿದ್ದೇನೆ ಎಂದರು.

ಜಿಲ್ಲಾಡಳಿತ ಸತ್ತು ಹೋಗಿದೆಯಾ ? ಜಿಲ್ಲಾ ಉಸ್ತುವಾರಿ ಸಚಿವರು ಬದುಕಿದ್ದಾರಾ ?

ಇದೇ ವೇಳೆ ಒಬ್ಬ ಕೊರೊನಾ ಸೋಂಕಿತರ ಉದಾಹರಣೆ ನೀಡಿದ ಶಾಸಕ ಸಾ ರಾ ಮಹೇಶ್, 36 ವರ್ಷದ ದಾಕ್ಷಿಯಿಣಿ ಎಂಬ ಮಹಿಳೆಗೆ ಕೊರೊನಾ ಇತ್ತು. ನಾನೇ ಹೇಳಿದರು ಸೋಂಕಿತರಿಗೆ ವೆಂಟಿಲೇಟರ್ ವ್ಯವಸ್ಥೆ ಆಗಿಲ್ಲ. ಡಿಎಚ್‌ ಓಗೆ 5 ರಿಂದ 6 ಬಾರಿ ಕರೆ ಮಾಡಿದೆ. 36 ವರ್ಷದ ಹೆಣ್ಣು ಮಗಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಯಾಕೆ ಜನರ ಬಳಿ ಸುಳ್ಳು ಹೇಳುತ್ತಿದ್ದೀರಾ ? ಜನರನ್ನು ಏನು ಮಾಡಬೇಕು ಎಂದು ಕೊಂಡಿದ್ದೀರಾ ? ಜಿಲ್ಲಾಡಳಿತ ಸತ್ತು ಹೋಗಿದೆಯಾ ? ಜಿಲ್ಲಾ ಉಸ್ತುವಾರಿ ಸಚಿವರು ಬದುಕಿದ್ದಾರಾ ? ಎಂದು ಹರಿಹಾಯ್ದರು. 1 ಲಕ್ಷ ಕೊಡುತ್ತೀನಿ ಅಂದರು ವೈದ್ಯರು ಸಿಗುತ್ತಿಲ್ಲ. ಈಗಲೂ ಸಾಕಷ್ಟು ಜನ ವೆಂಟಿಲೇಟರ್‌ಗೆ ಕಾದು ಕುಳಿತಿದ್ದಾರೆ ಎಂದು ಸರ್ಕಾರ ಮತ್ತು ಜಿಲ್ಲಾಡಳಿತ ವಿರುದ್ಧ ಶಾಸಕ ಸಾ ರಾ ಮಹೇಶ್ ವಾಗ್ದಾಳಿ ನಡೆಸಿದರು.

Key words: Covid –mysore-MLA -sara Mahesh –against- government – Mysore district administration

website developers in mysore