ಪದೇ ಪದೇ ಮಾಸ್ಕ್ ಹಾಕದೆ ದಂಡ ಕಟ್ಟುತ್ತಿದ್ರೆ ಹುಷಾರ್: ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಲು ಫೀಲ್ಡ್ ಗೆ ಇಳಿಯಲಿದೆ ಪಾಲಿಕೆ ಟೀಂ

ಮೈಸೂರು,ಏಪ್ರಿಲ್,21,2021(www.justkannada.in): ಕೋವಿಡ್ ನಿಯಮ ಉಲ್ಲಂಘನೆ ಮಾಡಿ ದಂಡ ಕಟ್ಟಿ ಸುಮ್ಮನಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಪದೇ ಪದೇ ಮಾಸ್ಕ್ ಹಾಕದೆ ದಂಡ ಕಟ್ಟುತ್ತಿದ್ದರೆ ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪನಾಗ್ ಎಚ್ಚರಿಕೆ ನೀಡಿದ್ದಾರೆ.jk

ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಠಿಣ ನಿಯಮ ಜಾರಿಗೊಳಿಸಿದ್ದು ಇಂದಿನಿಂದ ನಿಯಮಗಳು ಜಾರಿಗೆ ಬರಲಿವೆ. ಇನ್ನು ಮೈಸೂರಿನಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಲು ಪಾಲಿಕೆ ಟೀಂ ಫೀಲ್ಡಿಗಿಳಿಯಲಿದ್ದಾರೆ. ಇಂದು ಮಧ್ಯಾಹ್ನದಿಂದಲೆ ಪಾಲಿಕೆ ಹಾಗೂ ಪೋಲಿಸ್ ಇಲಾಖೆಯಿಂದ ಜಂಟಿ ಕಾರ್ಯಾಚರಣೆ ನಡೆಯಲಿದ್ದು , ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಹಾಗೂ ಡಿಸಿಪಿ‌ ಗೀತಾ ಪ್ರಸನ್ನ  ಅವರು ಇಂದು ಮಧ್ಯಾಹ್ನ ಸಿಟಿ ರೌಂಡ್ಸ್ ಹಾಕಲಿದ್ದಾರೆ.

ಪಾಲಿಕೆ ತಂಡ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪರಿಸ್ಥಿತಿ ಅವಲೋಕಿಸಲಿದ್ದು, ಸರ್ಕಾರದ ಮಾರ್ಗಸೂಚಿ ಅನುಸರಿಸದವರಿಗೆ ದಂಡ ಹಾಕಲಿದೆ. ಇದೇ ವೇಳೆ ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಪಾಲಿಸುವಂತೆ ವರ್ತಕರಿಗೆ ಪಾಲಿಕೆ ತಂಡ ಖಡಕ್ ವಾರ್ನಿಂಗ್ ನೀಡಲಿದೆ.covid-law-violation-criminal-case-mysore-city-corporation-commissioner-shilpnag

ಈ ಕುರಿತು ಮಾದ್ಯಮಗಳಿಗೆ ಮಾಹಿತಿ ನೀಡಿದ ಪಾಲಿಕೆ ಆಯುಕ್ತೆ ಶಿಲ್ಪಾನಾಗ್. ಮೈಸೂರು ನಗರದಲ್ಲಿ ಕೊರೊನಾ ಪಾಸಿಟಿವ್ ಹೆಚ್ಚುತ್ತಿದ್ದು, ಪದೇ ಪದೇ ಮಾಸ್ಕ್ ಹಾಕದೆ ದಂಡ ಕಟ್ಟುತ್ತಿದ್ದರೆ ಕ್ರಿಮಿನಲ್ ಮೊಕದ್ದಮೆ ಹಾಕಲಾಗುತ್ತದೆ. ನಿಯಮನ ಉಲ್ಲಂಘನೆ ಮಾಡಿ ದಂಡ ಕಟ್ಟಿ ಸುಮ್ಮನಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕ್ರಿಮಿನಲ್ ಮೊಕದಮ್ಮೆ ಅನಿವಾರ್ಯ ಎಂದಿದ್ದಾರೆ.

ನಗರದಲ್ಲಿ 26 ಕಂಟೋನ್ಮೆಂಟ್ ಜೋನ್ ಗುರುತಿಸಲಾಗಿದೆ. ಅಲ್ಲಿ ಸ್ಟಿಕ್ಕರ್ ಹಾಕಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ. ಇದರಿಂದ ಜನರಲ್ಲಿ ಜಾಗೃತಿ ಮೂಡುತ್ತದೆ. ಈ ಮೂಲಕ ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಬಹುದಾಗಿದೆ. ಕಳೆದ ಬಾರಿಯ ವಿಶೇಷ ತಂಡವನ್ನು ಮತ್ತೆ ರಚಿಸಲಾಗಿದೆ. ಪ್ರತಿ ವಾರ್ಡ್‌ಗೆ ಇಬ್ಬರನ್ನು ನಿಯೋಜಿಸಲಾಗಿದೆ. ವಾರ್ಡ್‌ನ ಜನರ ಬಗ್ಗೆ ನಿಗಾ ಇಡಲು 130 ಜನರ ನೇಮಕ ಮಾಡಲಾಗುತ್ತಿದೆ. ಕಂಟ್ರೋಲ್ ರೂಂ ರಚನೆ ಹೆಲ್ಪ್ ಲೈನ್ ತೆರೆಯಲಾಗಿದ್ದು, . 24/7 ಕಾಲ್ ಸೆಂಟರ್ ಕೆಲಸ ಮಾಡತ್ತದೆ

ಖುದ್ದು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುಲಾಗುವುದು ಈ ವೇಳೆ ಕೋವಿಡ್ ನಿಯಮ ಉಲ್ಲಂಘನೆ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಮಾಸ್ಕ್ ಹಾಕದವರು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ಹೆಚ್ಚಿನ ದಂಡ ವಿಧಿಸಲಾಗುವುದು ಎಂದು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ತಿಳಿಸಿದ್ದಾರೆ.

Key words: covid law –violation- criminal case-  Mysore City  corporation-Commissioner- Shilpnag