ಕೋವಿಡ್ ಕಿಟ್ ಖರೀದಿ ಅವ್ಯವಹಾರ ಆರೋಪ: ವಿಶೇಷ ಆಡಿಟ್ ಮಾಡಿಸಲು ತಿರ್ಮಾನ- ಹೆಚ್.ಕೆ ಪಾಟೀಲ್….

ಬೆಂಗಳೂರು,ಆ,4,2020(www.justkannada.in): ಕೋವಿಡ್ ಕಿಟ್ ಖರೀದಿ ಅವ್ಯವಹಾರ ಆರೋಪ ಸಂಬಂಧ ಆಡಿಟ್ ಜನರಲ್ ಮೂಲಕ ವಿಶೇಷ ಆಡಿಟ್ ಮಾಡಿಸಲು ತಿರ್ಮಾನ ಮಾಡಲಾಗಿದೆ. ಒಂದು ತಿಂಗಳಲ್ಲಿ ವರದಿ ನೀಡಲು ಸೂಚನೆ ನೀಡಿದ್ದೇವೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್ ಕೆ ಪಾಟೀಲ್  ತಿಳಿಸಿದರು.jk-logo-justkannada-logo

ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆ  ನಡೆಯಿತು. ಸಭೆಯ ಬಳಿಕ  ಮಾತನಾಡಿದ ಸಮಿತಿ ಅಧ್ಯಕ್ಷರಾದ ಎಚ್ ಕೆ ಪಾಟೀಲ್, ವೈದ್ಯಕೀಯ ಉಪಕರಣಗಳ ಖರೀದಿ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಖರೀದಿ ಬಗ್ಗೆ ಬಂದ ದೂರಿನ ಬಗ್ಗೆ ಚರ್ಚೆ ಮಾಡಲಾಗಿದೆ. ಖರೀದಿ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಸಭೆಗೆ ಪೂರಕ ದಾಖಲೆಗಳನ್ನು ಅಧಿಕಾರಿಗಳು ನೀಡಿದ್ದಾರೆ. ಕೋವಿಡ್ ಸಂಬಂಧಿಸಿದಂತೆ ಆಗಿರುವ ಖರೀದಿ ಬಗ್ಗೆ ಕೆಲ ಅನುಮಾನಗಳು ಇನ್ನೂ ಇದೆ. ಅಧಿಕಾರಿಗಳು ಕೊಟ್ಟ ಉತ್ತರ ಸಮಿತಿಗೆ ಸಮಾಧಾನ ಆಗಿಲ್ಲ. ಹೀಗಾಗಿ ಆಡಿಟ್ ಜನರಲ್ ಮೂಲಕ ವಿಶೇಷ ಆಡಿಟ್ ಮಾಡಿಸಲು ತಿರ್ಮಾನ ಮಾಡಲಾಗಿದೆ. ಒಂದು ವರದಿ ನೀಡಲು ಸೂಚನೆ ನೀಡಿದ್ದೇವೆ ಎಂದರು.

ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರು 11 ಸಾವಿರ ಜನ ನಾಪತ್ತೆಯಾಗಿದ್ದಾರೆ. ಇವರನ್ನ ಹುಡುಕುವ ಪ್ರಯತ್ನ ಸರ್ಕಾರದಿಂದ ನಡೆದಿಲ್ಲ. ಸಾರ್ವಜನಿಕರಿಗೆ ಮಾಹಿತಿ ನೀಡಲಿಲ್ಲ. ಅಧಿಕಾರಿಗಳಿಗೆ ಸೂಚನೆ ನೀಡಲಿಲ್ಲ. ಈ ವಿಚಾರದಲ್ಲಿ ಸರ್ಕಾರ ಬೇಜವಾಬ್ದಾರಿಯಾಗಿ ನಡೆದು ಕೊಳ್ತಿದೆ. ಪೊಲೀಸ್ ಆಯುಕ್ತರು ಆಹಾರ‌ ಕಿಟ್ ಕೊಡಿಸುವುದರಲ್ಲಿಯೇ ಮಗ್ನರಾಗಿದ್ರು. ಆದ್ರೆ ಈ ಬಗ್ಗೆ ಸರ್ಕಾರ 24 ಗಂಟೆಯೊಳಗೆ ಉತ್ತರಿಸಬೇಕು ಎಂದು ಹೆಚ್ ಕೆ ಪಾಟೀಲ್ ಒತ್ತಾಯಿಸಿದರು.covid-kit-purchase-special-audit-former-minister-hk-patil

ಕೋವಿಡ್ ಸೋಂಕಿತರಿಗೆ ಸಾಕಷ್ಟು ತೊಂದರೆ ಆಗ್ತಿದೆ. ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಬಗ್ಗೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನ ಭೇಟಿ ಮಾಡಿ ಸಮಗ್ರ ಮಾಹಿತಿ ನೀಡಿದ್ದೇನೆ. ಇದನ್ನ ಆಯೋಗ ದೂರು ಎಂದು ಪರಿಗಣಿಸಿದ್ದು, ವಿಚಾರಣೆ ನಡೆಸಿದೆ. ಕೋವಿಡ್ ನಿಂದಾಗಿ ಮೃತಪಟ್ಟವರ ಅಂತ್ಯ ಸಂಸ್ಕಾರದ ಬಗೆಗಿನ ನಿಯಮಗಳನ್ನ ಸಾರ್ವಜನಿಕರ ಮುಂದಿಡಿ ಎಂದು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದೆ ಎಂದು ಹೆಚ್.ಕೆ ಪಾಟೀಲ್ ತಿಳಿಸಿದರು.

Key words: Covid kit-purchase -special audit-former minister- HK Patil.