ಫ್ರಾನ್ಸ್‌, ಇಟಲಿಯ ಫ‌ುಟ್ಬಾಲಿಗರಿಗೆ ಕೋವಿಡ್ 19 ಸೋಂಕು !

ರೋಮ್‌, ಮಾರ್ಚ್ 19, 2020 (www.justkannada.in): ಫ್ರಾನ್ಸ್‌ ಮತ್ತು ಇಟಲಿಯ ಮತ್ತಿಬ್ಬರು ಫ‌ುಟ್ಬಾಲಿಗರಿಗೆ ಕೋವಿಡ್ 19 ಸೋಂಕು ಹರಡಿರುವುದು ಖಚಿತಗೊಂಡಿದೆ.

ಫ್ರಾನ್ಸ್‌ ವಿಶ್ವಕಪ್‌ ವಿಜೇತ ತಂಡದ ಸದಸ್ಯ ಬ್ಲೆಸ್‌ ಮ್ಯಾಟ್ಯೂಡ್‌ ಹಾಗೂ ವಿಶ್ವಕಪ್‌ ವಿಜೇತ ಇಟಲಿ ತಂಡದ ತಾರಾ ಆಟಗಾರ ಮಥಾಯಿಸ್‌ ಜಕಗ್ನಿಯ ಸೋಂಕಿಗೆ ತುತ್ತಾಗಿದ್ದಾರೆ. ಇವರಿಬ್ಬರೂ ಸೀರಿ ಎ ಕ್ಲಬ್‌ ಫ‌ುಟ್ಬಾಲ್‌ ಕೂಟದಲ್ಲಿ ಭಾಗಿಯಾಗಿದ್ದರು.

ಇದರೊಂದಿಗೆ ಇಟಲಿಯ ಕೂಟದಲ್ಲಿ ಪಾಲ್ಗೊಂಡ ಒಟ್ಟು 13 ಫ‌ುಟ್‌ಬಾಲ್‌ ಆಟಗಾರರಿಗೆ ಸೋಂಕು ತಗುಲಿದಂತಾಗಿದೆ. ಮತ್ತಷ್ಟು ಆಟಗಾರರಿಗೆ ಸೋಂಕು ತಗುಲಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.