“ಕೋರ್ಟ್ ಛೀಮಾರಿ ಹಾಕಿದ್ರೂ ಬುದ್ದಿ ಕಲಿಲಿಲ್ಲ” : ಕೇಂದ್ರದ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ

ಮೈಸೂರು,ಜನವರಿ,13,2021(www.justkannada.in) : ರೈತರು 48 ದಿನಗಳಿಂದ ಪ್ರತಿಭಟನೆ ನಡೆಸುತ್ತ ಚಳಿಯಲ್ಲಿ ರಸ್ತೆಯಲ್ಲಿ ಕುಳಿತಿದ್ದಾರೆ. ಆದರೆ, ಪ್ರಧಾನಿ ಅವರನ್ನು ಮಾತನಾಡಿಸುವ ಗೋಜಿಗೆ ಹೋಗಿಲ್ಲ. ಕೋರ್ಟ್ ಛೀಮಾರಿ ಹಾಕಿದ್ರೂ ಬುದ್ದಿ ಕಲಿಲಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶವ್ಯಕ್ತಪಡಿಸಿದ್ದಾರೆ.jk-logo-justkannada-mysore

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಸಮಿತಿ ರಚನೆ ಮಾಡೊದಾಗಿ ಹೇಳಿದರು ರೈತರು ಒಪ್ಪಿಕೊಂಡಿಲ್ಲ. ಬಿಜೆಪಿಯವರ ಎಪಿಎಂಸಿ ನಿಲ್ಲಿಸೋಕೆ ಹೋಗಿದ್ದಾರೆ ಎಂದು ಕಿಡಿಕಾರಿದರು.

ದುಡ್ಡು ಕೊಡ್ಬಿಟ್ಟು ತಕೊಂಡೋಗು‌ ಆರ್.ಅಶೋಕ್ ಗೆ ಟಾಂಗ್

ಸಿದ್ದರಾಮಯ್ಯ ಗೋ ಹತ್ಯೆ ಕಾಯ್ದೆಗೆ ವಿರೋಧ ಅಂತಾರೆ. ಆದರೆ, ನಾನು ರೈತರ ಹಿತ ಕಾಯೋ ಬಗ್ಗೆ ಯೋಚನೆ ಮಾಡ್ತಿದಿನಿ. ವಯಸ್ಸಾದ ಹಸುಗಳನ್ನು ಸಾಕಲು ರೈತರು ಏನುಮಾಡಬೇಕು. ಸಚಿವ ಆರ್.ಅಶೋಕ್ ನಮ್ಮ ಮನೆಗೆ ತಂದು ಬಿಡಿ ಎಂದಿದ್ದಾನೆ ಗಿರಾಕಿ. ಅದಕ್ಕೆ ನಾನ್ ಹೇಳಿದ್ದೀನಿ ದುಡ್ಡು ಕೊಡ್ಬಿಟ್ಟು ತಕೊಂಡೋಗು‌ ಅಂತ ಎಂದು ಟೀಕಿಸಿದರು.

ನಿಮಗೆ ಮಾನ ಮರ್ಯಾದೆ ಏನಾದ್ರೂ ಇದೆಯಾ?Court,Rebuke,Didn't,understand,Against,central government,Opposition,party,Siddaramaiah 

ಬಿಜೆಪಿಯವರು ಗೋಹತ್ಯೆ ಕಾಯ್ದೆ ಬಗ್ಗೆ ಮಾತಾಡ್ತಾರೆ. ಸಗಣಿ ಎತ್ತುವವರು, ಮೇವು ಹಾಕುವವರು, ನೀರು ಕುಡಿಸುವವರು ರೈತರು. ಆದರೆ, ಅದರ ಹಾಲು ಕುಡಿದು ಗೋವು ಪೂಜೆ ಮಾಡ್ತಿವಿ, ಕಾಯ್ದೆ ತರುತ್ತೀವೆ ಅನ್ನೊರು ನೀವು. ನಿಮಗೆ ಮಾನ ಮರ್ಯಾದೆ ಏನಾದ್ರೂ ಇದೆಯಾ ? ಎಂದು ಪ್ರಶ್ನಿಸಿದ್ದರು.

key words : Court-Rebuke-Didn’t-understand-Against-central government- Opposition-party-Siddaramaiah