ಮೈತ್ರಿ ಬಗ್ಗೆ ರಾಷ್ಟ್ರ, ರಾಜ್ಯ ನಾಯಕರು ತೀರ್ಮಾನಿಸುತ್ತಾರೆ- ಮಾಜಿ ಸಚಿವ ಸಿ,ಎಸ್ ಪುಟ್ಟರಾಜು ಹೇಳಿಕೆ…

ಮೈಸೂರು,ಆ,26,2019(www.justkannada.in): ಜೆಡಿಎಸ್- ಕಾಂಗ್ರೆಸ್ ಮೈತ್ರಿ ಬಗ್ಗೆ ರಾಷ್ಟ್ರ, ರಾಜ್ಯ ನಾಯಕರು ತೀರ್ಮಾನಿಸುತ್ತಾರೆ ಎಂದು ಮಾಜಿ ಸಚಿವ ಸಿ,ಎಸ್ ಪುಟ್ಟರಾಜು ಹೇಳಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ  ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮೈತ್ರಿ ವಿಚಾರ ರಾಷ್ಟ್ರ, ರಾಜ್ಯ ನಾಯಕರು ತೀರ್ಮಾನ ಮಾಡಬೇಕು. ಆ ಬಗ್ಗೆ ಸಹಪಾಠಿಗಳು ತೀರ್ಮಾನ ಮಾಡ್ತಾರೆ. ಅದರ ಬಗ್ಗೆ ಚರ್ಚೆ ಬೇಡ. ಸಮ್ಮಿಶ್ರ ಸರ್ಕಾರ ಮುಗಿದು ಹೋದ ಕಥೆ.. ಚರ್ಚೆ ಮಾಡಿದರೆ ಮತ್ತೆ ಸಮ್ಮಿಶ್ರ ಸರ್ಕಾರ ಬರುತ್ತಾ. ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ನಡುವೆ ಹೋರಾಟವಿದೆ. ಇದಕ್ಕೆ ಬೇರೆ ರೀತಿ ಅರ್ಥ ಕಲ್ಪಿಸುವುದು ಬೇಡ ಎಂದರು.

ಸಿಎಂ ಬಿ.ಎಸ್ ಯಡಿಯೂರಪ್ಪ ನವರೂ ನಮ್ಮ ಜಿಲ್ಲೆಯವರೇ. ಜಿಲ್ಲೆಗೆ ಅನುದಾನ ಸಿಕ್ಕೇ ಸಿಗುತ್ತದೆ ಎಂದು ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ವಿಶ್ವಾಸ ವ್ಯಕ್ತಪಡಿಸಿದರು.

ಚಲುವರಾಯಸ್ವಾಮಿ ಯಾರ ಜೊತೆ ಇದ್ದಾರೆ ಎಂಬುದು ಗೊತ್ತಿಲ್ಲ. ಯಡಿಯೂರಪ್ಪ ಜೊತೆ ಇದಾರೋ, ಸಿದ್ದರಾಮಯ್ಯ ಜೊತೆ ಇದಾರೋ ಗೊತ್ತಿಲ್ಲ. ಟೋಪಿ ಹಾಕುವುದನ್ನು ಕುಮಾರಸ್ವಾಮಿಗೆ ಕಲಿಸಿದ್ದೇ ಚಲುವರಾಯಸ್ವಾಮಿ ಎಂದು ಪುಟ್ಟರಾಜು ಲೇವಡಿ ಮಾಡಿದರು.

Key words: Country – state leaders -decide – alliance-former Minister C, S Puttaraju