ಪರಿಷತ್ ನಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ಮತ್ತು ತಮ್ಮ ಚುನಾವಣೆ ಸ್ಪರ್ಧೆ ಬಗ್ಗೆ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದು ಹೀಗೆ…

ಮೈಸೂರು,ಡಿಸೆಂಬರ್,2,2021(www.justkannada.in): ಬಿಜೆಪಿ ಜೆಡಿಎಸ್ ಹೊಂದಾಣಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಎಲ್ಲಿ ಜೆಡಿಎಸ್ ಅಭ್ಯರ್ಥಿ ಇಲ್ಲ ಅಲ್ಲಿ ಬೆಂಬಲ ನೀಡಿ. ಅಭ್ಯರ್ಥಿ ಕಣದಲ್ಲಿರುವ ಕ್ಷೇತ್ರದಲ್ಲಿ ಯಾವುದೇ ಹೊಂದಾಣಿಕೆ ಇಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಸ್ಪಷ್ಟಪಡಿಸಿದರು.

ವಿಧಾನಪರಿಷತ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿದ ಬಿವೈ ವಿಜಯೇಂದ್ರ, ಎಲ್ಲಾ ಕ್ಷೇತ್ರದಲ್ಲೂ ಬಿಜೆಪಿ ಪರವಾದ ವಾತಾವರಣ ಇದೆ. ಮೈಸೂರಿನ ನಮ್ಮ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ. ಮಂಡ್ಯದಲ್ಲಿ ಯಾರು ನಮ್ಮ ಅಭ್ಯರ್ಥಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.ಈಗ ಅಲ್ಲಿ ತ್ರಿಕೋನ ಸ್ಪರ್ಧೆ ಇದೆ. ಡಿಸೆಂಬರ್ 5 ಕ್ಕೆ ಬಿ ಎಸ್ ಯಡಿಯೂರಪ್ಪ ಪ್ರಚಾರಕ್ಕೆ ಬರಲಿದ್ದಾರೆ. ಮೈಸೂರು ಮಂಡ್ಯ ಚಾಮರಾಜ ನಗರದಲ್ಲಿ ಪ್ರಚಾರ ಮಾಡಲಿದ್ದಾರೆ ಎಂದರು.

ಇನ್ನು ಅಭ್ಯರ್ಥಿ ಕಣದಲ್ಲಿರುವ ಕ್ಷೇತ್ರದಲ್ಲಿ ಜೆಡಿಎಸ್ ಜತೆ ಯಾವುದೇ ಹೊಂದಾಣಿಕೆ ಇಲ್ಲ. ಮೈಸೂರು, ಚಾಮರಾಜನಗರ ಮಂಡ್ಯ ಇಲ್ಲಿ ಹೊಂದಾಣಿಕೆ ಇಲ್ಲ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟನೆ ನೀಡಿದರು.

ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್ ಮತ್ತು ಬಿಎಸ್ ವೈ ತೀರ್ಮಾನ ಮಾಡುತ್ತಾರೆ.

ನಾನು ಚುನಾವಣೆಗೆ ನಿಲ್ಲುವ ಬಗ್ಗೆ ಬಿಜೆಪಿ ಅಧ್ಯಕ್ಷರು, ಯಡಿಯೂರಪ್ಪನವರು ತೀರ್ಮಾನ ಮಾಡುತ್ತಾರೆ.ನಂತರ ನಾನು ಯಾವ ಕ್ಷೇತ್ರದಲ್ಲಿ ನಿಲ್ಲಬೇಕೆಂದು ತೀರ್ಮಾನ ಮಾಡುತ್ತೇನೆ. ಬಿಜೆಪಿ ರಾಜ್ಯ ಉಪಾಧ್ಯಕ್ಷನಾಗಿ‌ ರಾಜ್ಯ ಸುತ್ತುತ್ತಿದ್ದೇನೆ. ನನ್ನ ಭವಿಷ್ಯದ ದೃಷ್ಟಿಯಿಂದ ಕ್ಷೇತ್ರವನ್ನ ಬೇಗ ಫೈನಲ್ ಮಾಡಿಕೊಳ್ಳಬೇಕು. ಯಾವ ಕ್ಷೇತ್ರ ಎಂಬುದರ ಬಗ್ಗೆ ಚಿಂತನೆ ಮಾಡುತ್ತಿದ್ದೇನೆ. ಐದಾರು ತಿಂಗಳಲ್ಲಿ ಈ ವಿಚಾರದಲ್ಲಿ ಸ್ಪಷ್ಟ ತೀರ್ಮಾನಕ್ಕೆ ಬರುತ್ತೇನೆ ಎಂದು ಬಿವೈ ವಿಜಯೇಂದ್ರ ತಿಳಿಸಿದರು.

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಸಂಬಂಧ, ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಅಮಿತ್ ಶಾ ಅವರೇ ಸ್ಪಷ್ಟವಾಗಿ ಈ ಬಗ್ಗೆ ಹೇಳಿದ್ದಾರೆ. ಮುಂದಿನ ಚುನಾವಣೆಯೂ ಸಿಎಂ ಬೊಮ್ಮಯಿಯವರ ನಾಯಕತ್ವದಲ್ಲೇ ನಡೆಯಲಿದೆ. ಈ ಬಗ್ಗೆ ಅಮಿತ್ ಶಾ ಅವರೆ ಹೇಳಿದ ಮೇಲೆ ಚರ್ಚೆ ಅಗತ್ಯ ಇಲ್ಲ ಎಂದರು.

ಆ ಕ್ಷೇತ್ರದಲ್ಲಿ ಯಾರ ಜೊತೆ ರೌಡಿಗಳು ಇದ್ದಾರೆ ಅನ್ನೋದು ಆ ಕ್ಷೇತ್ರದ ಜನರಿಗೆ ಗೊತ್ತಿದೆ

ಶಾಸಕ ಎಚ್‌.ಆರ್ ವಿಶ್ವನಾಥ್ ಮೇಲೆ ಹಲ್ಲೆಗೆ ಸ್ಕೆಚ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ಒಬ್ಬ ಜನಪ್ರತಿನಿಧಿ ಬಗ್ಗೆ ಈ ರೀತಿ ಕೊಲೆ ಹಂತಕ್ಕೆ ಇಳಿದಿದ್ದು ಭಯ ತರಿಸಿದೆ. ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲು. ಅಕ್ಕ ಪಕ್ಕದ ರಾಜ್ಯದಲ್ಲಿ ಈ ರೀತಿ ವಾತಾವರಣ ಇತ್ತು. ವಿಶ್ವನಾಥ್ ಒಬ್ಬ ಪ್ರಭಾವಿ ರಾಜಕಾರಣಿ ಸಾಕಷ್ಟು ಭಾರಿ ಗೆಲವು ಸಾಧಿಸಿದ್ದಾರೆ. ಇದು ಭಯ ಸೃಷ್ಟಿ ಮಾಡುವಂತಹ ಘಟನೆ. ಬಿಜೆಪಿ ಪಕ್ಷ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂದರು.

ಹಾಗೆಯೇ ಪ್ರಕರಣದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ,  ಆ ಕ್ಷೇತ್ರದಲ್ಲಿ ಯಾರ ಜೊತೆ ರೌಡಿಗಳು ಇದ್ದಾರೆ ಅನ್ನೋದು ಆ ಕ್ಷೇತ್ರದ ಜನರಿಗೆ ಗೊತ್ತಿದೆ. ಘಟನೆ ಬಗ್ಗೆ ಜನರಿಗೆ ಸಂಪೂರ್ಣ ಮಾಹಿತಿ ಇದೆ. ಡಿ ಕೆ ಶಿವಕುಮಾರ್ ಅವರದ್ದು ಉಡಾಫೆ ಹೇಳಿಕೆ. ಇಂತಹದನ್ನು ಯಾರು ಸಮರ್ಥನೆ ಮಾಡಬಾರದು. ಈ ರೀತಿ ಸಂಸ್ಕೃತಿ ಇದು ಇಲ್ಲಿಗೆ ಕೊನೆಯಾಗಬೇಕು. ಈ ರೀತಿಯ ಸಂಸ್ಕೃತಿ ಮುಂದುವರಿಯಬಾರದು. ಬಿಗಿಯಾದ ಕ್ರಮ ತೆಗೆದುಕೊಳ್ಳಬೇಕು.ಸಿಎಂ ಸಹ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.

ದೆಹಲಿ ವರಿಷ್ಠರು ಇಲ್ಲದಿದ್ದರೆ ನನ್ನನ್ನು ಮುಗಿಸಿ ಬಿಡುತ್ತಿದ್ದರು ಎಂಬ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ಅವರು ಯಾವ ಅರ್ಥದಲ್ಲಿ ಈ ಮಾತು ಹೇಳಿದ್ದಾರೆಂಬುದು ಗೊತ್ತಿಲ್ಲ. ಅದರ ಬಗ್ಗೆ ಹೆಚ್ಚು ಮಾತನಾಡಲಾರೆ ಎಂದರು.

Key words: council-election- BY Vijayendra- mysore-bjp-JDS –alliance

ENGLISH SUMMARY….

B.Y. Vijendra’s response on alliance with JDS in LC elections and his contest in the election
Mysuru, December 2, 2021 (www.justkannada.in): “B.S. Yediyurappa has already clarified about the BJP-JDS alliance. He has informed us to extend support where the JDS candidate is absent. There will be no alliance in the constituencies where there are our candidates,” opined BJP State Vice-President B.Y. Vijendra.
Speaking in Mysuru today about the MLC elections, he informed that a pro-BJP is existing at all places in the state. “I am quite confident that our candidate will win in Mysuru. At Mandya, nobody had considered our candidate seriously. But now, there is a triangular competition. Yediyurappa will visit on December 5 for campaigning. He will be touring in Mysuru, Mandya, and Chamarajanagara,” he said.
In his response to his contest in the elections, he said that the BJP State president, Yediyurappa will decide about it. “After that, I will decide from where I should contest. As of now, I am touring the state as the BJP state vice-president. I am supposed to finalize the constituency as early as possible in my interest. I am thinking about it and will arrive at a final decision in the next 5-6 months,” he added.
Keywords: B.S. Yediyurappa/ B.Y. Vijendra/ Council elections/ BJP-JDS alliance