ರಾಜ್ಯದಲ್ಲಿ ಈವರೆಗೆ ಕೋರೋನಾ ಪ್ರಕರಣ ಪತ್ತೆಯಾಗಿಲ್ಲ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್

ಮೈಸೂರು, ಮಾರ್ಚ್ 7, 2020 (www.juskannada.in): ರಾಜ್ಯದಲ್ಲಿ ಈವರೆಗೆ ಒಂದೆ ಒಂದು ಕೋರೋನಾ ಪ್ರಕರಣ ಪತ್ತೆಯಾಗಿಲ್ಲ ಎಂದು ಮೈಸೂರಿನಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

ರಾಜ್ಯದಲ್ಲಿ ಗ್ರಾ.ಪಂ ವ್ತಾಪ್ತಿಯಿಂದ ಹಿಡಿದು ನಗರ ಪ್ರದೇಶದ ಎಲ್ಲಾ ಸ್ಥಳದಲ್ಲೂ ಮುನ್ನಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರ‌ದಿಂದ ಟಾಸ್ಕ್ ಫೋರ್ಸ್‌ ರಚಿಸಿ ಕೋರೋನಾ ಪ್ರಕರಣಗಳ ಮೇಲೆ ನಿಗಾ ವಹಿಸಲಾಗಿದೆ. ನಮ್ಮ ಸರ್ಕಾರದ ಮುಂಜಾಗ್ರತಾ ಕ್ರಮದಿಂದಾಗಿ ಕರ್ನಾಟಕಕ್ಕೆ ಕೋರೋನಾ ಬಂದಿಲ್ಲ‌ ಎಂದು ಹೇಳಿದರು.

ಲಕ್ಷಾಂತರ ಜನ ನಿತ್ಯ ರಾಜ್ಯದಿಂದ ಓಡಾಟ ಮಾಡ್ತಿದ್ರು ಒಂದೆ ಒಂದು ಪ್ರಕರಣ ಪತ್ತೆಯಾಗಿಲ್ಲ. ರಾಜ್ಯದ ಕಾರ್ಪೋರೇಟ್ ಹಾಗೂ ಐಟಿ ಕಂಪನಿಯಲ್ಲಿ ಬಯೋಮೆಟ್ರಿಕ್ ಲಾಗ್‌ಇನ್ ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸರ್ಕಾರಿ ಕಚೇರಿಗಳಲ್ಲು ಬಯೋಮೆಟ್ರಿಕ್ ಲಾಗ್ಇನ್ ನಿಲ್ಲಿಸುವಂತೆ ಶೀಘ್ರದಲ್ಲೇ ಆದೇಶ ಮಾಡುತ್ತೇವೆ. ಕೋರೋನ ಪತ್ತೆಗಾಗಿ ಹೊಸ ಯಂತ್ರಗಳನ್ನ ಜಿಲ್ಲಾ ಕೇಂದ್ರಗಳಿಗೆ ಕಳುಹಿಸಿಕೊಡುತ್ತಿದ್ದೇವೆ. ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

ಬಜೆಟ್ ಬಗ್ಗೆ ಅಸಮಾಧಾನ ಇಲ್ಲ: ರಾಜ್ಯ ಬಜೆಟ್ ಬಗ್ಗೆ ಯಾರಿಗು ಅಸಮಾಧಾನ ಇಲ್ಲ. ಆರ್ಥಿಕ ಹಿ‌ಂಜರಿತದ ನಡುವೇಯೆ ಉತ್ತಮ ಬಜೆಟ್ ನೀಡಿದ್ದಾರೆ. ಎಲ್ಲಾ ಭಾಗಗಳಿಗು ಅವಶ್ಯಕತೆಗೆ ತಕ್ಕ ಅನುದಾನ ನೀಡಿದ್ದಾರೆ. ಇದು ಅಭಿವೃದ್ಧಿ ದೃಷ್ಟಿಯಿಂದ ಪೂರಕವಾದ ಬಜೆಟ್ ಆಗಿದೆ ಎಂದು ಮೈಸೂರಿನಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.