ರಾಜ್ಯದಲ್ಲಿ 2021ರ ಆರಂಭದಲ್ಲೇ ಕೊರೋನಾ ಲಸಿಕೆ ಸಿಗುವ ಸಾಧ್ಯತೆ- ಸಚಿವ ಡಾ.ಕೆ.ಸುಧಾಕರ್…

ಬೆಂಗಳೂರು,ಅಕ್ಟೋಬರ್,27,2020(www.justkannada.in):   2021 ರ ಆರಂಭದಲ್ಲೇ ಕೊರೊನಾ ವೈರಸ್ ಲಸಿಕೆ ಸಿಗುವ ಸಾಧ್ಯತೆ ಇದೆ. ಹೀಗಾಗಿ ಲಸಿಕೆ ಹಂಚಿಕೆ ಮಾಡಲು ಸಿದ್ಧತೆ ನಡೆಸಿದ್ದೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.jk-logo-justkannada-logo

ಇಂದು ಸುದ್ದಿಗೋಷ್ಠಿ  ನಡೆಸಿ ಮಾತನಾಡಿದ ಸಚಿವ ಡಾ.ಕೆ. ಸುಧಾಕರ್, ಅಸ್ಟ್ರಾಜನಿಕಾ ಸಂಸ್ಥೆ ಎಂಡಿ ಗಗನ್ ದೀಪ್ ಸೇರಿದಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. ಅಕ್ಸಫರ್ಡ್ ವಿವಿ ಲಸಿಕೆ ಪ್ರಯೋಗ ಮೊದಲ ಹಂತ ಮುಕ್ತಾಯವಾಗಿದ್ದು, 2021 ಆರಂಭದಲ್ಲೇ ರಾಜ್ಯದ ಜನತೆಗೆ ಕೋವಿಡ್ ಲಸಿಕೆ ಸಿಗುವ ಸಾಧ್ಯತೆ ಇದೆ ಎಂದರು.coronavirus-vaccination-early-2021-minister-dr-k-sudhakar

ಕೊರೋನಾ ಇನ್ನು ಹೋಗಿಲ್ಲ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದ ಸಚಿವ ಸುಧಾಕರ್,  ಕೋವಿಡ್ ಲಸಿಕೆಗೆ ಎಲ್ಲಾ ಕಡೆ ಪ್ರಯತ್ನ ನಡೆಯುತ್ತಿದೆ. ಕೆಲ ಕಂಪನಿಗಳು 7ರಿಂದ 8 ತಿಂಗಳಲ್ಲಿ ಲಸಿಕೆ ಸಂಶೋಧನೆಗೆ ಯತ್ನಿಸುತ್ತಿವೆ. 2021ರಲ್ಲಿ ಕೊರೋನಾ ಲಸಿಕೆ ಸಿಗುವ ವಿಶ್ವಾಸ ಮೂಡಿಸಿದ್ದಾರೆ.  ಕೊರೋನಾ ಲಸಿಕೆಗೆ ಯಾವುದೇ ದರ ನಿಗದಿಯಾಗಿಲ್ಲ. ಆಕ್ಸ್ ಫರ್ಡ್ ವಿವಿಯ ಅಸ್ಟ್ರಾಜನಿಕಾ ಲಸಿಕೆ ಸಂಶೋಧನೆ ಮಾಡುತ್ತಿದೆ ಎಂದರು.

key words: Coronavirus –vaccination-  early- 2021-Minister-Dr. K. Sudhakar.