ಕೊರೋನಾ ವೈರಸ್ ಗೆ ಲಸಿಕೆ ಕಂಡು ಹಿಡಿಯುವ ಸಂಶೋಧನಾ ತಂಡದಲ್ಲಿ ಕನ್ನಡಿಗನಿಗೆ ಸ್ಥಾನ….

kannada t-shirts

ಬೆಂಗಳೂರು,ಮಾ,16,2020(www.justkannada.in):  ಪ್ರಪಂಚದಲ್ಲೇ ಭಾರಿ ಆತಂಕ ಸೃಷ್ಠಿಸಿರುವ ಮಹಾಮಾರಿ ಕೊರೋನಾ ವೈರಸ್ ಗೆ ಲಸಿಕೆ ಕಂಡು ಹಿಡಿಯಲು ವಿಜ್ಞಾನಿಗಳು ಮುಂದಾಗಿದ್ದು, ಇದಕ್ಕಾಗಿ ಯುರೋಪ್ ನಲ್ಲಿ ವಿಜ್ಞಾನಿಗಳ ತಂಡ ರಚಿಸಲಾಗಿದೆ. ಈ ನಡುವೆ  ಯುರೋಪಿಯನ್ ಟಾಸ್ಕ್ ಫೋರ್ಸ್ ಫಾರ್ ಕೊರೋನಾ ವೈರಸ್(ಕೋವಿಡ್ 19) ಟಾಸ್ಕ್ ಫೋರ್ಸ್ ನಲ್ಲಿ ಕನ್ನಡಿಗನಿಗೆ ಸ್ಥಾನ ಸಿಕ್ಕಿದೆ.

ಹಾಸನ ಜಿಲ್ಲೆ ಅರಕಲಗೂಡು ಮೂಲದವರಾದ ಮಹದೇಶ್  ಪ್ರಸಾದ್ ಅವರಿಗೆ ಕೊರೋನಾ ವೈರಸ್ ಗೆ ಲಸಿಕೆ ಕಂಡು ಹಿಡಿಯುವ ಸಂಶೋಧನಾ ತಂಡದಲ್ಲಿ ಸ್ಥಾನ ಸಿಕ್ಕಿದೆ.   ಯುರೋಪಿಯನ್ ಟಾಸ್ಕ್ ಫೋರ್ಸ್ ಫಾರ್ ಕೊರೋನಾ ವೈರಸ್(ಕೋವಿಡ್ 19) ಟಾಸ್ಕ್ ಫೋರ್ಸ್ ನಲ್ಲಿ ಸ್ಥಾನ ಸಿಕ್ಕಿದೆ.  ಮಹದೇಶ್ ಪ್ರಸಾದ್ ಸಂಶೋಧನೆ ಸಂಬಂಧ ಕಳೆದ ಒಂದು ವರ್ಷದಿಂದ ಬೆಲ್ಜಿಯಂನಲ್ಲಿದ್ದಾರೆ.

ಯುರೋಪಿಯನ್ ವಿಜ್ಞಾನಿಗಳ ತಂಡದ ಸದಸ್ಯನಾಗಿ ಕೊರೋನಾ ವೈರಸ್ ಲಸಿಕೆ ಕಂಡುಹಿಡಿಯುವ ಸಂಶೋಧನೆಯಲ್ಲಿ ತೊಡಗಿರುವ ಮಹದೇಶ್ ಪ್ರಸಾದ್ ಮೈಸೂರು ವಿಶ್ವವಿದ್ಯಾಲಯದಲ್ಲಿ ಬಯೋ ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟರಲ್ ಸಂಶೋಧನಾರ್ಥಿಯಾಗಿದ್ದರು.

Key words: coronavirus-research team –kannadiga- mahadesh Prasad- Hassan

 

 

website developers in mysore