ಕೋವಿಡ್ 3ನೇ ಅಲೆ ಭೀತಿ ನಡುವೆ ಮಹಾರಾಷ್ಟ್ರದಲ್ಲಿ ಫುನಃ ಏರಿಕೆಯಾಗುತ್ತಿರುವ ಕೊರೋನಾ ಸೋಂಕಿನ ಸಂಖ್ಯೆ.

ಮುಂಬೈ, ಜೂನ್ 27, 2021 (www.justkannada.in): ಕೋವಿಡ್ 3ನೇ ಅಲೆ ಭೀತಿ ನಡುವೆ ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ವಾರದ ಸೋಂಕಿನ ಪ್ರಮಾಣದಲ್ಲಿ ಏರಿಕೆ ಹಾಗೂ ಪಾಸಿಟಿವಿಟಿ ಪ್ರಮಾಣದಲ್ಲಿ ಏರಿಕೆಯೊಂದಿಗೆ ಉದ್ಧವ್ ಠಾಕ್ರೆ ಸರ್ಕಾರ ಎಚ್ಚರಿಕೆಯ ಗಂಟೆಯನ್ನು ಸೂಚಿಸಿದೆ.  ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಜಿಲ್ಲೆಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಕಠಿಣ ನಿಯಮಗಳನ್ನು ಸಡಿಲಿಕೆಗೊಳಿಸದಿರುವಂತೆ  ಸೂಚನೆ ನೀಡಿದೆ.jk

ಮಹಾರಾಷ್ಟ್ರದಲ್ಲಿ ಗುರುವಾರದಂದು ೯,೮೪೪ ಹೊಸ ಕೋವಿಡ್-19 ಸೋಂಕಿನ ಪ್ರಕರಣಗಳು ದಾಖಲಾಗಿದ್ದು, ೧೯೭ ಮಂದಿ ಮೃಪಟ್ಟಿರುವುದಾಗಿ ತಿಳಿದು ಬಂದಿದೆ. ರಾಜ್ಯದಲ್ಲಿ ಒಂದು ವಾರದ ಅಂತರದ ನಂತರ ೧೦,೦೦೦ ಕೋವಿಡ್-೧೯ ಸೋಂಕುಗಳು ದಾಖಲಾಗಿವೆ.

ಜೂನ್ 16ರಂದು ಮಹಾರಾಷ್ಟ್ರದಲ್ಲಿ ೧೦,೧೦೭ ಪ್ರಕರಣಗಳು ದಾಖಲಾಗಿದ್ದವು. ದೈನಂದಿನ ಸಂಖ್ಯೆ ೧೦,೦೦೦ಕ್ಕೂ ಕಡಿಮೆ ಆಗಿತ್ತು. ಆದರೆ ಪುನಃ ಈಗ ರಾಜ್ಯದ ಒಟ್ಟಾರೆ ೦.೧೫ ಪ್ರಮಾಣದ ಹೋಲಿಕೆಯಲ್ಲಿ ೧೧ ಜಿಲ್ಲೆಗಳಲ್ಲಿ ಒಂದು ವಾರದ ಸೋಂಕಿನ ಪ್ರಮಾಣದಲ್ಲಾಗುತ್ತಿರುವ ಹೆಚ್ಚಳ ಅಲ್ಲಿನ ಸರ್ಕಾರಕ್ಕೆ ಆತಂಕವನ್ನುಂಟು ಮಾಡಿದೆ. ಅದೇ ರೀತಿ ರಾಜ್ಯದ ಸರಾಸರಿ ೪.೫೪ ರಷ್ಟು ಪಾಸಿಟಿವಿಟಿ ಪ್ರಮಾಣದ ಹೋಲಿಕೆಯಲ್ಲಿ ಈ ೧೧ ಜಿಲ್ಲೆಗಳ ಪಾಸಿಟಿವಿಟಿ ಪ್ರಮಾಣ ಹೆಚ್ಚಿದೆ.

ಆದಾಗ್ಯೂ, ಮುಂದಿನ ೨-೪ ವಾರಗಳವರೆಗೆ ಮೂರನೇ ಅಲೆಯ ಎಚ್ಚರಿಕೆ ಗಂಟೆಯೇನೂ ಇಲ್ಲಾ ಎಂದು ಅಲ್ಲಿನ ಕೋವಿಡ್ ಟಾಸ್ಕ್ ಫೋರ್ಸ್ ತಿಳಿಸಿದ್ದು, ರಾಜ್ಯ ಸರ್ಕಾರ ಯಾವುದಕ್ಕೂ ಎಲ್ಲವನ್ನೂ ಎದುರಿಸಲು ಸಜ್ಜಾಗಿರುವುದು ಒಳಿತು ಎಂದು ಸೂಚಿಸಿದೆ.

ಮಹಾರಾಷ್ಟçದ ಮುಖ್ಯಮಂತ್ರಿ ಶ್ರೀ ಉದ್ಧವ್ ಠಾಕ್ರೆ ಅವರು ಗುರುವಾರದಂದು ಸೋಂಕಿನ ಪ್ರಮಾಣ ಹೆಚ್ಚಿರುವ ಏಳು ಜಿಲ್ಲೆಗಳ ಮೇಲೆ ಹೆಚ್ಚಿನ ನಿಗಾ ಹಾಗೂ ಗಮನ ವಹಿಸುವಂತೆ ನಿರ್ದೇಶಿಸಿದ್ದಾರೆ. ಅದೇ ರೀತಿ ಆ ಜಿಲ್ಲೆಗಳಲ್ಲಿ ತಪಾಸಣೆ ಹಾಗೂ ಲಸಿಕಾಕರಣದ ಗತಿಯನ್ನು ಹೆಚ್ಚಿಸುವಂತೆಯೂ ಸೂಚಿಸಿದ್ದಾರೆ.

ಸುದ್ದಿ ಮೂಲ: ಇಂಡಿಯಾ ಟುಡೆ

Key words: coronavirus -Maharashtra – rising – Again