ಸ್ಪೈನ್ ಪ್ರಧಾನಿ ಪತ್ನಿಗೂ ಕೊರೊನಾ ಸೋಂಕು !

ಮ್ಯಾಡ್ರಿಡ್, ಮಾರ್ಚ್ 15, 2020 (www.justkannada.in): ಸ್ಪೈನ್ ಪ್ರಧಾನಿ ಪೆಡ್ರೊ ಸ್ಯಾಂಚೆಝ್ ಅವರ ಪತ್ನಿ ಬೆಗೊನಾ ಗೊಮೆಜ್ ಅವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

ಹೌದು. ಖ್ಯಾತನಾಮರ ಕೊರೋನಾ ವೈರಸ್ ಸೋಂಕು ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ. ಸದ್ಯ ಪತಿ-ಪತ್ನಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿರುವುದಾಗಿ ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಕಳೆದ ವಾರ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಅವರ ಪತ್ನಿಯಲ್ಲಿ ಕೂಡ ಕೊರೋನಾ ಕಾಣಿಸಿಕೊಂಡಿತ್ತು.