ಬೆಳಗಾವಿ ಜಿಲ್ಲೆಯಲ್ಲಿಂದು ಒಂದೇ ದಿನ 17 ಮಂದಿಗೆ ಕೊರೊನಾ ಸೋಂಕು ದೃಢ

Promotion

ಬೆಳಗಾವಿ, ಏಪ್ರಿಲ್ 16, 2020 (www.justkannada.in): ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೇ 17 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಒಟ್ಟು ಸಂಖ್ಯೆ 36 ಕ್ಕೆ ಏರಿಕೆಯಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಇಂದು ಗುರುವಾರ(ಏ.16) ಮತ್ತೇ 17 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿರುತ್ತದೆ. ಈ ಹೊಸ 17 ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟಾರೆ 36 ಕ್ಕೆ ಏರಿದಂತಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಇಂದಿನ(ಏ.16) ಬೆಳಿಗ್ಗೆಯ ಪತ್ರಿಕಾ ಪ್ರಕಟಣೆಯ ಪ್ರಕಾರ ಹಿರೇಬಾಗೇವಾಡಿಯಲ್ಲಿ 8, ಚಿಕ್ಕೋಡಿ 1, ರಾಯಬಾಗ 7 ಹಾಗೂ ಬೆಳಗಾವಿಯಲ್ಲಿ 1 ಪ್ರಕರಣಗಳು ದೃಢಪಟ್ಟಿರುತ್ತವೆ.