ಕೊರೋನಾ ವೈರಸ್ ಭೀತಿ ಹಿನ್ನೆಲೆ: ಧಾರವಾಹಿಗಳ ಚಿತ್ರೀಕರಣಕ್ಕೆ ಬ್ರೇಕ್…

kannada t-shirts

ಬೆಂಗಳೂರು,ಮಾ,19,2020(www.justkannada.in):  ಇಡೀ ಪ್ರಪಂಚದಲ್ಲೇ ಭಾರಿ ತಲ್ಲಣ ಮೂಡಿಸಿರುವ ಕೊರೊನಾ ವೈರಸ್ ಭೀತಿ, ಇದೀಗ ರಾಜ್ಯ ಕಿರುತೆರೆಗೂ ತಟ್ಟಿದೆ. ಹೌದು, ಕೊರೋನಾ ಸೋಂಕಿನ ಭೀತಿ ಹಿನ್ನೆಲೆ ಮಾರ್ಚ್ 22ರಿಂದ ಧಾರವಾಹಿಗಳ ಚಿತ್ರೀಕರಣವನ್ನ ಬಂದ್ ಮಾಡಲಾಗಿದೆ

ಕನ್ನಡದ ಎಲ್ಲಾ ಕಿರುತೆರೆ ವಾಹಿನಿಗಳಿಗೆ ಕನ್ನಡ ಟಿವಿ ಒಕ್ಕೂಟದಿಂದ ನೋಟೀಸ್ ನೀಡಲಾಗಿದ್ದು,  ಮಾರ್ಚ್ 22 ರಿಂದ ಧಾರವಾಹಿಗಳ ಚಿತ್ರೀಕರಣ ಬಂದ್ ಮಾಡಲಾಗಿದೆ.  ಕೊರೋನಾ ಸೋಂಕು ಭೀತಿ ಹಿನ್ನಿಲೆ ಧಾರವಾಹಿ ಜತೆ  ರಿಯಾಲಿಟಿ ಶೋಗಳಿಗೂ ಬ್ರೇಕ್ ಬಿದ್ದಿದೆ.

ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್, ಮಾರ್ಚ್ 22ರಿಂದ ಏಪ್ರಿಲ್ 1ರ ವರೆಗೆ ಧಾರವಾಹಿಗಳ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗುತ್ತಿದೆ. ಅಲ್ಲದೇ ರಿಯಾಲಿಟಿ ಶೋ ಚಿತ್ರೀಕರಣವನ್ನು ಸಹ ನಿಲ್ಲಿಸಲಾಗುತ್ತಿದೆ. ಹೀಗಾಗಿ ಮುಂದಿನ 2 ದಿನಗಳಲ್ಲಿ ಧಾರವಾಹಿಗಳು ಬಂದ್ ಆಗಲಿದ್ದು, ವೀಕ್ಷಕರಿಗೆ ಉಂಟಾಗುವ ತೊಂದರೆಗೆ ವಿಷಾದಿಸಲಿದ್ದೇವೆ. ಈ ಎಲ್ಲಾ ಕ್ರಮವನ್ನು ಕೋರೋನಾ ವೈರಸ್ ಸೋಂಕು ಹರಡದಂತೆ ಕೈಗೊಳ್ಳಲಾಗಿದೆ ಎಂಬುದಾಗಿ ತಿಳಿಸಿದೆ.

ಇಂದು ರಾಜ್ಯದಲ್ಲಿ  ಮತ್ತೊಂದು ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದೆ.  ದುಬೈನಿಂದ ಕೊಡಗಿಗೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಸೋಂಕಿತ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಹೀಗಾಗಿ ಕಿರುತೆರೆ ಚಿತ್ರೋದ್ಯಮ ಸಹ ಮುಂಜಾಗ್ರತೆ ವಹಿಸಿದೆ.

 

Key words: coronavirus- horror-Break –shooting- reality show- Serial

website developers in mysore