ಕೊರೋನಾ ಸೋಂಕಿತರಿಗೆ ಬೆಡ್ ನೀಡದಿದ್ರೆ ಬೀಗ ಜಡಿಯುತ್ತೇವೆ- 7 ಆಸ್ಪತ್ರೆಗಳಿಗೆ ಬಿಬಿಎಂಪಿ ಖಡಕ್ ಎಚ್ಚರಿಕೆ…

ಬೆಂಗಳೂರು,ಅಕ್ಟೋಬರ್,31,2020(www.justkannada.in):  ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರಿಗೆ ಶೇ.50 ರಷ್ಟು ಬೆಡ್ ನೀಡದ ಆಸ್ಪತ್ರೆಗಳಿಗೆ ಬೀಗ ಜಡಿಯುವುದಾಗಿ ಬಿಬಿಎಂಪಿ ಖಡಕ್ ಎಚ್ಚರಿಕೆ ನೀಡಿದೆ.jk-logo-justkannada-logo

ಈ ಸಂಬಂಧ 7 ಆಸ್ಪತ್ರೆಗಳಿಗೆ ಶೋಕಾಸ್ ನೋಟೀಸ್ ಜಾರಿ ಮಾಡಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಕೊರೋನಾ ಸೋಂಕಿತರಿಗೆ ಶೇ.50 ರಷ್ಟು ಬೆಡ್ ನೀಡುವ ಸೂಚನೆ ಉಲ್ಲಂಘನೆಯಾಗಿದೆ. ಬಿಬಿಎಂಪಿಯಿಂದ ದಾಖಲಾಗುವ ಕೊರೋನಾ ಸೋಂಕಿತರಿಗೆ ಶೇ 50 ರಷ್ಟು ಬೆಡ್  ನೀಡಬೇಕು. ನೀಡಿರುವ ಶೋಕಾಸ್ ನೋಟೀಸ್ ಗೆ 24 ಗಂಟೆಯೊಳಗೆ ಉತ್ತರ ನೀಡಿ ಎಂದು 7 ಆಸ್ಪತ್ರೆಗಳಿಗೆ ಸೂಚಿಸಿದ್ದಾರೆ.coronavirus-50-beds-bbmp-warns-notice-7-hospitals

ಕೊರೋನಾ ನಿಯಮ ಉಲ್ಲಂಘಿಸಿದರೇ ಸುಮ್ಮನಿರಲ್ಲ. ನೋಟೀಸ್ ಗೆ ಸರಿಯಾದ ಉತ್ತರ ನೀಡದಿದ್ದರೇ ಮೊದಲ ಹಂತವಾಗಿ ಆಸ್ಪತ್ರೆಯ ಒಪಿಡಿ ಬಂದ್ ಮಾಡಲಾಗುತ್ತದೆ. ನಂತರ ರೋಗಿಗಳನ್ನ ಬೇರೆಡೆಗೆ ಶಿಫ್ಟ್ ಮಾಡಿ ಆಸ್ಪತ್ರೆಗೆ ಬೀಗ ಜಡಿಯುತ್ತೇವೆ. ಜತೆಗೆ ಆಸ್ಪತ್ರೆಯ ಲೈಸೆನ್ಸ್ ಕೂಡ ರದ್ಧು ಮಾಡಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

Key words: Coronavirus -50% beds –  BBMP- Warns -Notice -7 Hospitals