ಕೊರೊನಾ ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲ : ವಾಟಾಳ್ ನಾಗರಾಜ್ ಏಕಾಂಗಿ ಹೋರಾಟ

kannada t-shirts

ಮೈಸೂರು,ಏಪ್ರಿಲ್,18,2021(www.justkananda.in) : ಕೊರೊನಾ ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಏಕಾಂಗಿಯಾಗಿ ಕುಳಿತು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶವ್ಯಕ್ತಪಡಿಸಿದರು.jkನಗರದ ಜಯಚಾಮರಾಜ ಒಡೆಯರ್ ವೃತ್ತದ ಬಳಿ ಸತ್ಯಾಗ್ರಹ ನಡೆಸಿದ ಅವರು, ಪ್ರಾಣ ಉಳಿಸಿ, ಪ್ರಾಣ ಉಳಿಸಿ ಎಂದು ಘೋಷಣೆ ಕೂಗಿದರು. ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಸರ್ಕಾರಿ ಆಸ್ಪತ್ರೆ ನರಕ ಹಾಗೂ ಯಮಲೋಕ

ಸರ್ಕಾರಿ ಆಸ್ಪತ್ರೆ ನರಕ ಹಾಗೂ ಯಮಲೋಕ. ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲ’ ಆಂಬ್ಯುಲೆನ್ಸ್ ಇಲ್ಲ. ಅಲ್ಲೊಂದು, ಇಲ್ಲೊಂದು ಆಂಬ್ಯುಲೆನ್ಸ್ ಓಡಾಡುತ್ತೆ. ಕರೋನಾ ವಿಚಾರವಾಗಿ ಸರ್ಕಾರ ಸರಿಯಾದ ಭದ್ರತೆ ಮಾಡಿಲ್ಲ. ಮೂರು ಮಂದಿ ಸಚಿವರು ಮಾತ್ರ ಓಡಾಡುತ್ತಿದ್ದಾರೆ. ಬೊಮ್ಮಾಯಿ, ಅಶೋಕ್, ಸುಧಾಕರ್ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಪಾರ್ಲಿಮೆಂಟ್ ಸದಸ್ಯರು ಎಲ್ಲಿ?

ಉಳಿದವರು ಎಲ್ಲಿ ಹೋದರು- ಪಾರ್ಲಿಮೆಂಟ್ ಸದಸ್ಯರು ಎಲ್ಲಿ? ಒಂದೊಂದು ಭಾಗ ವಹಿಸಿಕೊಂಡು ಶಾಸಕರು, ಸಂಸದರು ವಹಿಸಿಕೊಂಡು ಕೆಲಸ ಮಾಡಬೇಕು. ರಾಜ್ಯದಲ್ಲಿ ಗಂಭೀರವಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಸುಮ್ಮನೆ ಲಾಕ್‌ಡೌನ್ ಮಾಡೋದಲ್ಲ

ಸುಮ್ಮನೆ ಲಾಕ್‌ಡೌನ್ ಮಾಡೋದಲ್ಲ. ಶವಗಳಿಗೂ, ಸುಡೋದಕ್ಕು ಜಾಗವಿಲ್ಲದೆ ಆಂಬ್ಯುಲೆನ್ಸ್ ಒಳಗಿವೆ. ಆರೋಗ್ಯ ಸಚಿವರು ಬೇಜವಬ್ದಾರಿ ಮಾತಾಡುತ್ತಾರೆ. ಸದ್ಯ ಲಾಕ್‌ಡೌನ್ ಬೇಡ, ಮಾಡಿದ್ರೆ ಜನರಿಗೆ ಸಮಸ್ಯೆ ಆಗುತ್ತೆ. ಮೊದಲು ಬಾರ್, ಮಾಲ್ ‌ಗಳನ್ನ ಬಂದ್ ಮಾಡಿ ಎಂದು ಆಗ್ರಹಿಸಿದರು.

ಬಡವರಿಗೆ ಸರಿಯಾದ ಬೆಡ್ ಸಿಗ್ತಿಲ್ಲ, ದುಡ್ಡಿದ್ದವರಿಗೆ ಮಾತ್ರ ಬೆಡ್ ಸಿಗತ್ತೆ

ವಿರೋಧ ಪಕ್ಷದವರು ಸುಮ್ಮನ್ನೇ ಕೂರೋದಲ್ಲ, ಅವರಿಗೆ ಜವಾಬ್ದಾರಿ ಹೆಚ್ಚಿದೆ. ಅವರು ಸೇರಿ ಕರೋನಾ ಓಡಿಸಲು ಪಕ್ಷಾತೀತವಾಗಿ ಬಂದಾಗಬೇಕು. ಬಡವರಿಗೆ ಸರಿಯಾದ ಬೆಡ್ ಸಿಗ್ತಿಲ್ಲ, ದುಡ್ಡಿದ್ದವರಿಗೆ ಮಾತ್ರ ಬೆಡ್ ಸಿಗತ್ತೆ. ಕುಮಾರಸ್ವಾಮಿಗೆ ಎರಡು ಆಸ್ಪತ್ರೆ ರಿಸರ್ವ್ ಮಾಡಿದ್ದೇವೆ ಅಂತಾರೆ. ಹಾಗದರೆ, ಬಡವರ ಕಥೆ ಏನು? ಎಂದು ಆಕ್ರೋಶವ್ಯಕ್ತಪಡಿಸಿದರು.

ಸರ್ಕಾರಕ್ಕೆ ನಾಚಿಕೆ ಮಾನ ಮರ್ಯಾದೆ ಇಲ್ಲ. ನೀವೂ ಲಾಕ್‌ಡೌನ್ ಮಾಡಿದ್ರೆ ಲಾಕ್‌ಡೌನ್ ಧಿಕ್ಕರಿಸುತ್ತೇವೆ. ಪ್ರಚಾರಕ್ಕೆ ಹೋಗಿ ಕೊರೋನಾ ಬಂದ ಎಲ್ಲ ರಾಜಕಾರಣಿಗಳು ಗುಣಮುಖವಾಗಲಿ. ಆದರೆ, ಲಾಕ್‌ಡೌನ್ ಯಾವುದೇ ಕಾರಣಕ್ಕು ಬೇಡ ಎಂದರು.Corona-preventing-Government-Absolute-Fail-Vatal Nagaraj-Alone-Fight

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕರೋನಾ ಬಂದಿದೆ. ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ತಿಳಿಸಿದರು.

key words : Corona-preventing-Government-Absolute-Fail-Vatal Nagaraj-Alone-Fight

website developers in mysore