ದೆಹಲಿಯಿಂದ ಬಂದಿದ್ದ ಬಿಎಸ್ ಎಫ್ ಯೋಧನಿಗೆ ಕೊರೋನಾ ಸೋಂಕು…

ಬೆಂಗಳೂರು,ಜೂ,13,2020(www.justkannada.in):  ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ಬಿಎಸ್ ಎಫ್ ಯೋಧನಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ನಗರದ ಆನೇಕಲ್ ನ ಅನಂತನಗರಕ್ಕೆ ಬಿಎಸ್ಎಫ್ ಯೋಧ ಆಗಮಿಸಿದ್ದರು. ರಜೆ ಹಿನ್ನೆಲೆ ತಮ್ಮ ಸಂಬಂಧಿಕರ ಮನೆಗೆ ಆಗಮಿಸಿದ್ದ ಬಿಎಸ್ ಎಫ್ ಯೋಧ ಕೊರೋನಾ ಟೆಸ್ಟ್ ಮಾಡಿಸಿದ್ದರು. ಈ ವೇಳೆ ಅವರಿಗೆ ಕೊರೋನಾ ಸೋಂಕಿರುವುದು ಪತ್ತೆಯಾಗಿದ್ದು ಅವರನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.coronal-infection-bsf-soldier-delhi-bangalore

ಹಾಗೆಯೇ ಅನೇಕಲ್ ನಲ್ಲಿ ಮತ್ತೊಂದು ಕೊರೋನಾ ಪ್ರಕರಣ ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಆನೇಕಲ್ ಗೆ ಬಂದಿದ್ದ 21 ವರ್ಷದ ಯುವತಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಆನೇಕಲ್ ನಲ್ಲಿ ಒಂದೇ ದಿನ ಇಬ್ಬರಿಗೆ ಕೊರೋನಾ ಸೋಂಕಿರುವುದು ಪತ್ತೆಯಾಗಿದೆ.

Key words: Coronal- infection – BSF- soldier – Delhi- bangalore