೨-೧೮ ವರ್ಷ ವಯಸ್ಸಿನ ಮಕ್ಕಳಿಗೆ ತುರ್ತು ಸಂದರ್ಭದಲ್ಲಿ ಕೋವ್ಯಾಕ್ಸಿನ್ ಲಸಿಕೆ ನೀಡಲು ಅನುಮತಿ.

kannada t-shirts

 

ನವ ದೆಹಲಿ, ಅಕ್ಟೋಬರ್ ೧೨, ೨೦೨೧ (www.justkannada.in): ಕೋವಿಡ್-೧೯ ಕುರಿತ ವಿಷಯ ತಜ್ಞ ಸಮಿತಿ (Subject Expert Committee -SEC), ತುರ್ತು ಸಂದರ್ಭದಲ್ಲಿ ೨-೧೮ ವರ್ಷ ವಯಸ್ಸಿನ ಮಕ್ಕಳಿಗೆ ಭಾರತ್ ಬಯೋಟೆಕ್ ತಯಾರಿಸಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಲು ಅನುಮತಿ ನೀಡಿದೆ.

ಹೈದ್ರಾಬಾದ್ ಮೂಲದ ಭಾರತ್ ಬಯೊಟೆಕ್ ಸೆಪ್ಟೆಂಬರ್ ತಿಂಗಳಲ್ಲಿ ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡುವ ೨ನೇ ಹಾಗೂ ೩ನೇ ಹಂತದ ಪ್ರಯೋಗವನ್ನು ಪೂರ್ಣಗೊಳಿಸಿ, ಪ್ರಯೋಗದ ದತ್ತಾಂಶವನ್ನು ಈ ತಿಂಗಳ ಆರಂಭದಲ್ಲಿ ಭಾರತದ ಔಷಧ ಹಾಗೂ ನಿಯಂತ್ರಣ ಅಧಿಕಾರಿಗೆ (Drugs and Comptroller General of India (DCGI)) ಸಲ್ಲಿಸಿತು.

ವಿಷಯ ತಜ್ಞರ ಸಮಿತಿಯ (ಎಸ್‌ಇಸಿ) ಸದಸ್ಯರ ಹೇಳಿಕೆಯ ಪ್ರಕಾರ ವಿವರವಾದ ಪರಿಶೀಲನೆ ಹಾಗೂ ಚರ್ಚೆಗಳ ನಂತರ ಸಮಿತಿಯು ತುರ್ತು ಸಂದರ್ಭಗಳಲ್ಲಿ ೨ ರಿಂದ ೧೮ ವರ್ಷ ವಯಸ್ಸಿನ ಮಕ್ಕಳಿಗೆ ಈ ಲಸಿಕೆಯನ್ನು ನೀಡಲು ಮಾರುಕಟ್ಟೆಗೆ ಬಿಡುಗಡೆ ಮಾಡಲು ಅನುಮತಿಸಿದೆ. ಭಾರತದಲ್ಲಿ ತಯಾರಿಸಲಾಗಿರುವ ಈ ಲಸಿಕೆಯನ್ನು ಮೊದಲ ಹಾಗೂ ಎರಡನೆ ಡೋಸ್‌ಗಳನ್ನು ೨೦ ದಿನಗಳ ಅಂತರದಲ್ಲಿ ನೀಡಲಾಗುವುದು.

ಭಾರತ್ ಬಯೊಟೆಕ್ ನೀಡಿರುವ ಹೇಳಿಕೆಯೊಂದರ ಪ್ರಕಾರ ತಾವು ಸಲ್ಲಿಸಿರುವ ಪ್ರಾಯೋಗಿಕ ದತ್ತಾಂಶವನ್ನು ಕೇಂದ್ರೀಯ ಔಷಧಗಳ ಗುಣಮಟ್ಟ ನಿಯಂತ್ರಣ ಸಂಸ್ಥೆ (Central Drugs Standard Control Organisation -CDSCO ) ಹಾಗೂ ಎಸ್‌ಇಸಿ ಕೂಲಂಕುಷವಾಗಿ ಪರಿಶೀಲಿಸಿ ಸಕಾರಾತ್ಮಕ ಶಿಫಾರಸ್ಸುಗಳನ್ನು ನೀಡಿದೆ ಎಂದು ತಿಳಿಸಿದೆ.

“ಇದು ೨-೧೮ ವರ್ಷ ವಯೋಮಾನದ ಮಕ್ಕಳಲ್ಲಿ ಕೋವಿಡ್-೧೯ಕ್ಕೆ ನೀಡುವ ಲಸಿಕೆಗಳ ಪೈಕಿ ಅನುಮೋದನೆ ಪಡೆದಿರುವಂತಹ ವಿಶ್ವದ ಮೊಟ್ಟ ಮೊದಲ ಲಸಿಕೆಯಾಗಿದೆ. ಇದಕ್ಕಾಗಿ ಭಾರತ್ ಬಯೊಟೆಕ್ DCGI, ವಿಷಯ ತಜ್ಞರ ಸಮಿತಿ ಹಾಗೂ CDSCO ಗಳಿಗೆ ಅತ್ಯಂತ ಶೀಘ್ರವಾಗಿ ಪರಿಶೀಲನೆ ಪ್ರಕ್ರಿಯೆಯನ್ನು ಮುಗಿಸಿ ಪ್ರತಿಕ್ರಿಯೆ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದೆ.

ಇನ್ನು, ಮಕ್ಕಳಿಗಾಗಿ ಕೊವ್ಯಾಕ್ಸಿನ್ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು CDSCO ವತಿಯಿಂದ ಇನ್ನುಳಿದ ನಿಯಂತ್ರಣ ಅನುಮೋದನೆಗಳನ್ನು ಎದುರು ನೋಡುತ್ತಿದ್ದೇವೆ,” ಎಂದು ಲಸಿಕಾ ತಯಾರಿಕಾ ಕಂಪನಿ ತಿಳಿಸಿದೆ.
ತುರ್ತು ಸಂದರ್ಭದಲ್ಲಿ ಬಳಸಲು ನೀಡಿರುವ ಈ ಅನುಮೋದನೆ ಕೆಲವು ನಿರ್ಧಿಷ್ಟವಾದ ಷರತ್ತುಗಳನ್ನು ಒಳಗೊಂಡಿದೆ. ಕೊವ್ಯಾಕ್ಸಿನ್ ತಯಾರಿಸಿದ ಕಂಪನಿ ಭಾರತ್ ಬಯೊಟೆಕ್ ಅನುಮೋದಿತ ಚಿಕಿತ್ಸಾ ಪ್ರಯೋಗ ಶಿಷ್ಠಾಚಾರ Whole Virion, Inactivated Corona Virus Vaccine ಪ್ರಕಾರ ತನ್ನ ಅಧ್ಯಯನವನ್ನು ಮುಂದುವರೆಸಲಿದೆ.

ಕಂಪನಿಯು ಅಪ್‌ಡೇಟ್ ಮಾಡಿರುವ ಸೂಚನಾ ಮಾಹಿತಿ/ ಪ್ಯಾಕೇಜ್ ಇರ್ನ್ಸ್ಟ್ (ಪಿಐ), ಉತ್ಪನ್ನದ ಗುಣಲಕ್ಷಣಗಳ ಸಾರಾಂಶ (Summary of Product Characteristics -SmPC ) ಹಾಗೂ ಫ್ಯಾಕ್ಟ್ಶೀಟ್‌ಗಳನ್ನು ಒದಗಿಸಬೇಕಿದೆ. ಮೇಲಾಗಿ ಕಂಪನಿಯು, ಮೊದಲ ಎರಡು ತಿಂಗಳ ಕಾಲ ೧೫ ದಿನಗಳಿಗೊಮ್ಮೆ ಹಾಗೂ ನಂತರದಲ್ಲಿ ತಿಂಗಳಿಗೊಮ್ಮೆಯಂತೆ ಹಾಗೂ ಹೊಸ ಔಷಧಗಳು ಹಾಗೂ ಚಿಕಿತ್ಸಾ ಪ್ರಯೋಗಗಳ ನಿಯಮಗಳು, ೨೦೧೯ರ ಅಗತ್ಯಗಳ ಪ್ರಕಾರ, ಎಇಎಫ್‌ಐ ಹಾಗೂ ಎಇಎಸ್‌ಐ ಕುರಿತ ದತ್ತಾಂಶವನ್ನೂ ಒಳಗೊಂಡಂತೆ ಸುರಕ್ಷತೆಗೆ ಸಂಬಂಧಪಟ್ಟ ದತ್ತಾಂಶ ಹಾಗೂ ನಂತರದ ವಿಶ್ಲೇಷಣೆಯನ್ನು ಸಲ್ಲಿಸಬೇಕಿದೆ.

DCGI -Approval - Covaccine -2 and  3 Phase-Clinical Trial - Children -Under 2 to 18 yrs.

ಈ ನಡುವೆ WHO ಕೊವ್ಯಾಕ್ಸಿನ್‌ ಅನ್ನು ತುರ್ತು ಸಂದರ್ಭದಲ್ಲಿ ಬಳಸಲು ಅನುಮೋದನೆ ನೀಡಬೇಕಿದೆ. ಭಾರತ್ ಬಯೊಟೆಕ್ ಜುಲೈ ೯ರಂದು WHO ಗೆ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದು, ಇದರ ಪರಿಶೀಲನಾ ಪ್ರಕ್ರಿಯೆಗೆ ಸುಮಾರು ಆರು ವಾರಗಳು ಬೇಕಾಗುತ್ತದೆ. ಈ ಪರೀಶಿಲನೆ ಜುಲೈ ಅಂತ್ಯದಲ್ಲೇ ಆರಂಭವಾಗಿತ್ತು.

ಆಗಸ್ಟ್ ತಿಂಗಳಲ್ಲಿ ಭಾರತ ಸರ್ಕಾರ ತುರ್ತು ಸಂದರ್ಭಗಳಲ್ಲಿ ೧೨ ರಿಂದ ೧೮ ವರ್ಷ ವಯಸ್ಸಿನ ಮಕ್ಕಳಿಗೆ ZyCov-D ನ ಕೋವಿಡ್-೧೯ ಲಸಿಕೆ ನೀಡಲು ಅನುಮತಿಸಿತ್ತು. ಈ ಲಸಿಕೆಯನ್ನು ಜೈಡಸ್ ಕ್ಯಾಡಿಲಾ ಔಷಧ ತಯಾರಿಕಾ ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಅನುಮೋದನೆ ಪಡೆದಿರುವ ಜಗತ್ತಿನ ಮೊಟ್ಟ ಮೊದಲ ಡಿಎನ್‌ಎ ಲಸಿಕೆಯಾಗಿದೆ.

ಸುದ್ದಿ ಮೂಲ: ಇಂಡಿಯಾ ಟುಡೆ

key words : corona virus-outbreak/story/covaxin-gets-emergency-approval-kids-2-18-years

 

website developers in mysore