ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕು ಕಚೇರಿ ಬಂದ್…

ಮೈಸೂರು,ಜು,7,2020(www.justkannada.in):  ಮೈಸೂರು ಜಿಲ್ಲೆಯಲ್ಲಿ ಗ್ರಾಮಾಂತರ ಭಾಗಕ್ಕೂ ಮಹಾಮಾರಿ ಕೊರೋನಾ ವ್ಯಾಪಿಸಿದ್ದು ಈ ಮಧ್ಯೆ ಸೋಂಕಿತ ವ್ಯಕ್ತಿಯ ತಮ್ಮ(ಸಹೋದರ) ಕಚೇರಿಯಲ್ಲಿ ಕೆಲಸ ಮಾಡಿದ ಹಿನ್ನೆಲೆ ಟಿ. ನರಸೀಪುರ ತಾಲ್ಲೂಕು ಕಚೇರಿಯನ್ನ ಬಂದ್ ಮಾಡಲಾಗಿದೆ.jk-logo-justkannada-logo

ಕೋವಿಡ್ 19 ಸೋಂಕಿತ ವ್ಯಕ್ತಿಯ ತಮ್ಮ, ಗ್ರಾಮ ಸೇವಕ ತಾಲ್ಲೂಕು ಕಚೇರಿಯಲ್ಲಿ ಕೆಲಸ ನಿರ್ವಹಿಸಿದ್ದರು. ಅತ್ತ ಅಣ್ಣನಿಗೆ ಕೊರೋನಾ ಪಾಸಿಟಿವ್ ಇದ್ದರೇ ಇತ್ತ  ತಮ್ಮ ಗ್ರಾಮಸೇವಕನಾಗಿ ಕೆಲಸ ಮಾಡಿದ್ದರು. ಹೀಗಾಗಿ ಮಿನಿ ವಿಧಾನಸೌದದ ಎಲ್ಲಾ ಕಚೇರಿಗಳನ್ನ ಬಂದ್ ಮಾಡಲಾಗಿದ್ದು, ಮಿನಿ ವಿಧಾನಸೌದದ ಸರ್ಕಾರಿ ಅಧಿಕಾರಿಗಳು ಭಯಭೀತರಾಗಿದ್ದಾರೆ.corona virus- mysore- T.Narasipur-talluk office- bandh

ಈ ಕುರಿತು ಮಾಹಿತಿ ನೀಡಿರುವ ತಿ.ನರಸೀಪುರ ತಾಲ್ಲೂಕು ದಂಡಾಧಿಕಾರಿ ನಾಗೇಶ್, ಸೋಂಕಿತ ವ್ಯಕ್ತಿಯ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿ ತಿಳಿದಿದೆ. ಅಲ್ಲದೇ ಮಿನಿವಿಧಾನಸೌಧದಲ್ಲಿ ಸೋಂಕಿತ ವ್ಯಕ್ತಿಯ ತಮ್ಮ ಕೆಲಸ ನಿರ್ವಹಿಸಿದ್ದಾರೆ. ಆತನನ್ನು ಈಗಾಗಲೇ ಕ್ವಾರಂಟೈನ್ ಮಾಡಲಾಗಿದೆ. ಜೊತೆಗೆ ಕೋವಿಡ್- 19 ಪರೀಕ್ಷೆ ಮಾಡಲಾಗುತ್ತದೆ. ಜೊತೆಗೆ ಒಂದು ದಿನಗಳ ಕಾಲ ಸಾರ್ವಜನಿಕರಿಗೆ ಮಿನಿವಿಧಾನಸೌದ ಪ್ರವೇಶ ನಿರ್ಬಂಧಿಸಲಾಗಿದೆ. ಸ್ಯಾನಿಟೈಸ್ ಮಾಡಿದ ಬಳಿಕ ಸೀಲ್ ಡೌನ್ ಮಾಡುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Key words: corona virus- mysore- T.Narasipur-talluk office- bandh