ಕೊರೋನಾ ಭೀತಿ ಹಿನ್ನೆಲೆ: ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯ ವಿವಿಧ ಸೇವೆಗಳು ಬಂದ್….

ಮೈಸೂರು,ಮಾ,19,2020(www.justkannada.in):  ಮೈಸೂರಿನಲ್ಲಿ ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ, ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯ ವಿವಿಧ ಸೇವೆಗಳು ಬಂದ್ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಮಾಹಿತಿ ನೀಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮೈಸೂರು ಡಿಸಿ ಅಭಿರಾಂ ಜೀ ಶಂಕರ್, ಅಟಲ್ ಜೀ ಜನಸ್ನೇಹಿ ಕೇಂದ್ರ, ಸ್ಪಂದನ ಕೇಂದ್ರ, ಆಧಾರ್ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳು. ಪ್ರಾದೇಶಿಕ ಸಾರಿಗೆ ಇಲಾಖೆಯ ಹೊಸ ವಾಹನ ಚಾಲನಾ ರಹದಾರಿ ಕಲಿಯುವವರ ಪರವಾನಿಗೆ. (ವಾಹನ ಚಾಲನಾ ಪರವಾನಿಗೆಯ ನವೀಕರಣವನ್ನು ಮಾಡಿಸಿಕೊಳ್ಳಲು ನಿರ್ಬಂಧ ಅನ್ವಯಿಸುವುದಿಲ್ಲ) ಉಪನೋಂದಣಾಧಿಕಾರಿಗಳ ಕಛೇರಿಯ ಸ್ಥಿರ ಆಸ್ತಿ ನೋಂದಣಿ ಸೇವೆ. ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳು. (ಖಾತೆ, ಸಾರ್ವಜನಿಕ ಹರಾಜುಗಳು, ಗ್ರಾಮ ಸಭೆ, ಇತರೆ ಲೈಸನ್ಸ್ ನೀಡುವಿಕೆ, ಜನನ ಮರಣ ಪ್ರಮಾಣ ಪತ್ರಗಳನ್ನು ವಿತರಿಸುವ ಸೇವೆಗಳನ್ನು ಹೊರತುಪಡಿಸಿ ) ಸಹಕಾರಿ ಸಂಘಗಳ ಉಪನಿಬಂಧಕರು ಸಹಕಾರ ಸಂಘಗಳ ಸಹಾಯಕ ಉಪನಿಬಂಧಕರು.

ಹಾಗೆಯೇ ಸಹಕಾರ ಇಲಾಖೆಗೆ ಸಂಬಂಧಿಸಿದಂತೆ ನೀಡಲಾಗುವ ಸೇವೆಗಳು. ಕೃಷಿ ತೋಟಗಾರಿಕೆ ಮೀನುಗಾರಿಕೆ ಇಲಖೆಯಲ್ಲಿನ ವಿವಿಧ ಸೇವೆಗಳು.  (ರೈತ ಆತ್ಮಹತ್ಯೆ ರೈತರ ಆಕಸ್ಮಿಕ ಮರಣಗಳನ್ನು ಹೊರತುಪಡಿಸಿ ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸೇವೆಗಳು ಬಂದ್. ಮಾಡಲಾಗಿದೆ ಎಂದು ಹೇಳಿದ್ದಾರೆ.

ವಿಶ್ವಪ್ರಸಿದ್ಧ ನಂಜನಗೂಡು ಜಾತ್ರೆಗು ಬ್ರೇಕ್.?: ಬಹುತೇಕ ಜಾತ್ರೆ ನಡೆಯೋದು ಅನುಮಾನ…

ವಿಶ್ವಪ್ರಸಿದ್ಧ ನಂಜನಗೂಡು ಜಾತ್ರೆ ಕುರಿತು ಪ್ರತಿಕ್ರಿಯಿಸಿದ ಡಿಸಿ ಅಭಿರಾಮ್ ಜಿ ಶಂಕರ್, ಏ‌.5 ರಂದು ನಂಜನಗೂಡು ಜಾತ್ರೆ ಇದೆ. ಸರ್ಕಾರದಿಂದ ಮಾ.31ರವರೆಗು ಬಂದ್ ಮುಂದುವರೆಸಲಾಗಿದೆ. ಈ ಹಿನ್ನಲೆಯಲ್ಲಿ ಜಾತ್ರೆ ಮುಂದೂಡುವ ಸಾಧ್ಯತೆ ಇದೆ. ಇನ್ನೆರಡು ಮೂರು ದಿನದಲ್ಲಿ ಈ‌ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ. ಈಗಾಗಲೇ ಮಲೈ ಮಹದೇಶ್ವರ ಬೆಟ್ಟದ ಜಾತ್ರೆ ಮುಂದೂಡಲಾಗಿದೆ. ಹಾಗಾಗಿ ನಂಜನಗೂಡು ಜಾತ್ರೆ ನಡೆಯೋದು ಬಹುತೇಕ ಅನುಮಾನ ಎಂದು  ತಿಳಿಸಿದರು.

Key words:  Corona virus- Anxiety- Mysore- District-Revenue Department- Services -bandh