ಕೊರೋನಾ ಭೀತಿ ಹಿನ್ನೆಲೆ: ಬಿಬಿಎಂಪಿಯಿಂದ 200 ಹಾಸಿಗೆಯ ಆಸ್ಪತ್ರೆ ನಿರ್ಮಾಣ…

ಬೆಂಗಳೂರು,ಮಾ,19,2020(www.justkannada.in): ಕೊರೋನಾ ವೈರಸ್ ಭೀತಿ ಹಿನ್ನೆಲೆ ಬಿಬಿಎಂಪಿ 200 ಹಾಸಿಗೆಯ ಆಸ್ಪತ್ರೆ ನಿರ್ಮಾಣ ಮಾಡಿದೆ. ಬೌರಿಂಗ್​ ಆಸ್ಪತ್ರೆಯಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿದೆ. ಅದು ಕೇವಲ ಕೋವಿಡ್​-19 ಗೆ ಮಾತ್ರ ಸೀಮಿತವಾಗಿರಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಸುಧಾಕರ್ , ಕೊರೋನಾ ಸೋಂಕು ನಿಯಂತ್ರಣ ಸಂಬಂಧ ಈಗಾಗಲೇ ಟಾಸ್ಕ್​ ಪೋರ್ಸ್​​ ರಚನೆ ಮಾಡಲಾಗಿದೆ. ಇಂದು ಟಾಸ್ಕ್​ ಪೋರ್ಸ್​​ನ ಮೊದಲ ಸಭೆ ನಡೆಯಲಿದೆ. ಕೊರೋನಾ ಭೀತಿ ಹಿನ್ನೆಲೆ, ಬಿಬಿಎಂಪಿ ಈಗಾಗಲೇ 200 ಹಾಸಿಗೆಗಳಿರುವ ಆಸ್ಪತ್ರೆ ಕಟ್ಟಿಸಿದೆ. ಬೌರಿಂಗ್​ ಆಸ್ಪತ್ರೆಯಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿದೆ.ಅದನ್ನ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಮಾತ್ರ ಬಳಸಲಾಗುತ್ತದೆ ಎಂದರು.

ಹಾಗೆಯೇ ಬೌರಿಂಗ್ ಆಸ್ಪತ್ರೆಯಲ್ಲಿ ಬ್ರಾ ಡ್​​ ವೇ ನಿರ್ಮಾಣ ಮಾಡಲಾಗಿದೆ. ಇಂದು ಅದು ಆರೋಗ್ಯ ಇಲಾಖೆಗೆ  ಹಸ್ತಾಂತರ ಮಾಡುತ್ತೇವೆ. ರಾಜ್ಯದಲ್ಲಿ ಐದು ಕಡೆ ಲ್ಯಾಬ್ ಟೆಸ್ಟಿಂಗ್ ಇದೆ. ಪ್ರತಿದಿನ 500 ಸ್ಯಾಂಪಲ್​ಗಳ ಪರೀಕ್ಷೆ ನಡೆಯುತ್ತಿದೆ. ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಸಾರ್ವಜನಿಕರು ಯಾವುದೇ ವದಂತಿಗೆ ಆಸ್ಪದ ನೀಡಬೇಡಿ  ಎಂದು ಸಚಿವ ಡಾ.ಕೆ ಸುಧಾಕರ್ ಸಲಹೆ ನೀಡಿದರು.

Key words: Corona virus-  200-bed -hospital -construction – BBMP.