ಹಾಸನ ಜಿಲ್ಲೆಯಲ್ಲಿ ಇಂದು  131 ಮಂದಿಗೆ ಕೊರೋನಾ ಸೋಂಕು ದೃಢ: ಐವರು ಸಾವು…

ಹಾಸನ,ಆ,3,2020(www.justkannada.in):  ಹಾಸನ ಜಿಲ್ಲೆಯಲ್ಲಿ  ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು,  ಇಂದು 131 ಮಂದಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ.jk-logo-justkannada-logo

ಹಾಸನ 70, ಅರಕಲಗೂಡು 20, ಹೊಳೇನರಸೀಪುರ 15, ಬೇಲೂರು 5 ಮಂದಿಗೆ, ಸಕಲೇಶಪುರದಲ್ಲಿ ಓರ್ವ ಮಂದಿಗೆ  ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 2548 ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ 1057 ಮಂದಿ ಸೋಂಕಿತರು ಗುಣಮುಖರಾಗಿದ್ದು 1421 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.corona-virus-131-hassan-five-death

ಕೊರೋನಾ ಸೋಂಕಿನಿಂದ ಇಂದು ಐವರು ಮೃತಪಟ್ಟಿದ್ದು ಕೊರೋನಾ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ ಜಿಲ್ಲೆಯಲ್ಲಿ  70ಕ್ಕೆ ತಲುಪಿದೆ. ನಿನ್ನೆ ಹಾಸನ ಜಿಲ್ಲೆಯಲ್ಲಿ 142 ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು.

Key words: Corona virus- 131 -Hassan –five-death