ಕೊರೋನಾ ರೋಗ ಲಕ್ಷಣ ಹೊಂದಿರುವವರು ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡುವುದು ಕಡ್ಡಾಯ- ಆರೋಗ್ಯ ಇಲಾಖೆಯಿಂದ ಆದೇಶ..

ಬೆಂಗಳೂರು,ಆ,7,2020(www.justkannada.in):  ಕೊರೋನಾ ಪರೀಕ್ಷಾ ವರದಿಯನ್ನು ಪರಿಣಾಮಕಾರಿಯಾಗಿ ಪಡೆಯುವ ಹಿನ್ನೆಲೆ, ರೋಗಲಕ್ಷಣ ಹೊಂದಿರುವವರು ಕಡ್ಡಾಯವಾಗಿ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಗಲಕ್ಷಣ ಹೊಂದಿರುವವರು ಕಡ್ಡಾಯವಾಗಿ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡಬೇಕು. ರ್ಯಾಪಿಡ್ ಆಂಟಿಜನ್ ಟೆಸ್ಟ್ ಜೊತೆ ಆರ್ಟಿಪಿಸಿಆರ್ ಪರೀಕ್ಷೆಗೊಳಪಡುವಂತೆ ಸೂಚನೆ ನೀಡಿದೆ.corona-symptoms-rtpcr-testing-order-health-department

ಕೊರೋನಾ ರೋಗ ಲಕ್ಷಣ ಇರುವವರಿಗೂ ಕೇವಲ ರ್ಯಾಪಿಡ್ ಆಂಟಿಜನ್ ಟೆಸ್ಟ್ ಮಾತ್ರ ಮಾಡಲಾಗುತ್ತಿತ್ತು. ಆದರೆ ರೋಗಲಕ್ಷಣ ಹೊಂದಿರುವವರ ರ್ಯಾಪಿಡ್ ಆಂಟಿಜನ್ ಟೆಸ್ಟ್ ನ ವರದಿಯಲ್ಲಿ ನೆಗೆಟಿವ್ ಬರುತ್ತಿರುವ ಹಿನ್ನೆಲೆ ಪರೀಕ್ಷೆ ವರದಿ ಪರಿಣಾಮಕಾರಿಯಾಗಿ ಪಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಈ ನೂತನ ಆದೇಶ ಹೊರಡಿಸಿದೆ.

Key words: Corona- Symptoms – RTPCR –testing- Order – Health Department