ಡಿ.20 ರಿಂದ ಜ.2 ರವರೆಗೆ ಕಠಿಣ ಕ್ರಮ:  ನೈಟ್ ಕರ್ಫ್ಯೂ ಕುರಿತು ಸಚಿವ ಸುಧಾಕರ್  ಹೇಳಿದ್ದೇನು ಗೊತ್ತೆ…

ಬೆಂಗಳೂರು,ಡಿಸೆಂಬರ್,4,2020(www.justkannada.in): ರಾಜ್ಯದಲ್ಲಿ ಕೊರೋನಾ ಹರಡುವಿಕೆ ತಡೆಗಾಗಿ ಡಿಸೆಂಬರ್ 20ರಿಂದ ಜನವರಿ 2ರವರೆಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ  ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದರು.logo-justkannada-mysore

ತಾಂತ್ರಿಕಾ ಸಲಹಾ ಸಮಿತಿ ಜತೆ ಮಹತ್ವದ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್,  ರಾಜ್ಯದಲ್ಲಿ ಕೊರೋನಾ 2ನೇ ಅಲೆ ಬರುವ ಸಾಧ್ಯತೆ ಇದೆ. ಜನವರಿ ಫೆಬ್ರವರಿಯಲ್ಲಿ 2ನೇ ಅಲೆ ಬರಲಿದೆ. ಕೊರೋನಾ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ರೋಗ ಲಕ್ಷಣ ಇರುವವರು ಟೆಸ್ಟ್ ಮಾಡಿಸಿಕೊಳ್ಳಬೇಕು. ಕೊರೋನಾ ಟೆಸ್ಟ್ ಸಂಖ್ಯೆ ಹೆಚ್ಚಿಸುತ್ತೇವೆ ಎಂದರು. corona- Strict action - Minister Sudhakar -night curfew.

ನ್ಯೂಇಯರ್ ಗೆ ನೈಟ್ ಕರ್ಫ್ಯೂ ಜಾರಿ ಮಾಡುವ ಅಗತ್ಯವಿಲ್ಲ. ನೈಟ್ ಕರ್ಫ್ಯೂ ಜಾರಿ ಮಾಡುವ ಸನ್ನಿವೇಶವೂ ಇಲ್ಲ. ನೈಟ್ ಕರ್ಫ್ಯೂ ಬಗ್ಗೆ  ತಾಂತ್ರಿಕಾ ಸಲಹಾ ಸಮಿತಿ ಸಲಹೆ ನೀಡಿಲ್ಲ. ಈ ಬಗ್ಗೆ ಸಿಎಂ ಜತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವ ಸುಧಾಕರ್ ಸ್ಪಷ್ಟನೆ ನೀಡಿದರು.

Key words: corona- Strict action – Minister Sudhakar -night curfew.