ಏ.15ರ ವೇಳೆಗೆ ಕೊರೋನಾ ತೀವ್ರ ಸ್ವರೂಪ ಸಾಧ್ಯತೆ: ಎಚ್ಚರಿಕೆ ವಹಿಸಿ- ಕೇಂದ್ರ ಸಚಿವ ಡಿ.ವಿ ಸದಾನಂದಗೌಡ…

kannada t-shirts

ಬೆಂಗಳೂರು,ಏಪ್ರಿಲ್,4,2021(www.justkannada.in): ಏಪ್ರಿಲ್ 15ರ ವೇಳೆಗೆ ಕೊರೋನಾ ಸೋಂಕು ತೀವ್ರ ಸ್ವರೂಪ ತಾಳುವ ಸಾಧ್ಯತೆ ಇದ್ದು, ಪ್ರತಿಯೊಬ್ಬರು ಕೊರೋನಾದಂತಹ ಸೋಂಕು ಹರಡದಂತೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸುವ ಜೊತೆಗೆ ಎಚ್ಚರಿಕೆ ವಹಿಸುವುದು ಸೂಕ್ತ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.Illegally,Sand,carrying,Truck,Seized,arrest,driver

ಬೆಂಗಳೂರಿನ ಮತ್ತಿಕೆರೆಯಲ್ಲಿಂದು ನೂತನವಾಗಿ ಸ್ಥಾಪಿತವಾದ ರಾಜ್ಯ ವಿವಿಧ ಕಾರ್ಮಿಕ ಸಮನ್ವಯ ಸಮಿತಿಯ ಚಾಲನಾ ಸಮಾರಂಭ  ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ,  ಕೊರೋನಾ ಸೋಂಕಿನ ಎರಡನೇ ಅಲೆ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆ ಜಾಸ್ತಿಯಾಗುತ್ತಿದ್ದು, ರಾಜ್ಯ ಇದರ ನಿಯಂತ್ರಣಕ್ಕಾಗಿ ಕೆಲ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದೆ. ಇದನ್ನು ಕಡ್ಡಾಯವಾಗಿ ಪಾಲಿಸಬೇಕು, ವಿಶೇಷವಾಗಿ ಯುವ ಜನತೆಯಲ್ಲೂ ಕೂಡ ಕೊರೋನಾ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಈ ಬಗ್ಗೆ ವರದಿ ಇದೆ. ಯುವಕರು ಸರ್ಕಾರದ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.

ಕೊರಾನಾದಂತಹ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರಿಗೆ ಪೂರಕವಾಗಿರುವಂತೆ ಅನೇಕ ಕಾರ್ಯಗಳನ್ನು ಜಾರಿಗೆ ತರುತ್ತಿದೆ. ಕಾರ್ಮಿಕರ ಯೋಗಕ್ಷೇಮವೇ ನಮ್ಮ ಗುರಿಯಾಗಿದೆ. ನೂತನವಾಗಿ ಆರಂಭಗೊಂಡಿರುವ ಕಾರ್ಮಿಕ ಸಮನ್ವಯ ಸಮಿತಿ ಕಾರ್ಮಿಕರ ಏಳಿಗೆಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸಲಿ ಎಂದರು.corona-severe-form-warned-union-minister-dv-sadananda-gowda

ಸಮನ್ವಯ ಸಮಿತಿ ಅಧ್ಯಕ್ಷೆ  ಲಕ್ಷ್ಮೀ ಶ್ರೀ ಹರಿ ಜೆ.ಎನ್  ರಾಜ್ಯದ ಎಲ್ಲ ವಿಭಾಗದ ಕಾರ್ಮಿಕರನ್ನು ಒಂದೇ ವೇದಿಕೆಯಲ್ಲಿ ತರುವ ನಿಟ್ಟಿನಲ್ಲಿ ರಾಜ್ಯ ವಿವಿಧ ಕಾರ್ಮಿಕರ ಸಮನ್ವಯ ಸಮಿತಿಯನ್ಬು ಹುಟ್ಟು ಹಾಕಲಾಗಿದೆ‌ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮದರಸ ಇ ತನ್ ಫಸುಲ್ ಕುರನ್ ಜಮೀಯ ಮಸೀದಿ ಅಧ್ಯಕ್ಷ ಮೌಲಿ ಬಶೀರ್ ಉಲಾ ಖಾನ್, ಸಮನ್ವಯ ಸಮಿತಿ ಗೌರಾವಧ್ಯಕ್ಷ ವೇಣು ಗೋಪಾಲ್ ಮತ್ತಿತರರು ಭಾಗವಹಿಸಿದ್ದರು.

Key words: corona – severe form- warned – Union Minister- DV Sadananda Gowda.

website developers in mysore